ಶಾಸಕಿ ರೂಪರಿಂದ ಬಡ ಕುಟುಂಬಗಳಿಗೆ ಗ್ಯಾಸ್ ವಿತರಣೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 46;

ಕೆಜಿಎಫ್.ಅ೫:ಗ್ಯಾಸ್ ಹೊಂದಿಲ್ಲದ ಪ್ರತಿ ಕುಟುಂಬಗಳಿಗೂ ಗ್ಯಾಸ್ ಸಂರ್ಪಕವನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು
ನಗರಸಭೆ ಮುಂಭಾಗದಲ್ಲಿ ೨೦೨೨-೨೩ ನೇ ಸಾಲಿನ ನಗರೋತ್ತನ ಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಶೇಖಡ ೨೪.೧೦ ಹಾಗೂ ಸಾಮಾನ್ಯ ಜನಾಂದವರಿಗೆ ಶೇಖಡ ೭.೨೫ ಯೋಜನೆಯಡಿಲ್ಲಿ ೬೫೦ ಫಲಾನೂಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಅರ್ಹ ಬಡ ಕುಟುಂಭಗಳಿಗೆ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್‌ಗಳನ್ನು ವಿತರಿಸಿದ ಶಾಸಕಿ ರೂಪಕಲಾಶಶಿಧರ್ ಮಾತನಾಡಿ ಸೌದೆ ಒಲೆಯಲ್ಲಿ ಅಡುಗೆಯನ್ನು ಯಾರು ಮಾಡಬಾರದು ಸಮಾಜದ ಕಟ್ಟ ಕಡೆಯ ಕುಟುಂಬವು ಸಹ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರವು ಉಚಿತವಾಗಿ ಗ್ಯಾಸ್ ಸಂರ್ಪಕವನ್ನು ಕಲ್ಪಿಸುವ ಉತ್ತಮವಾದ ಯೋಜನೆಯನ್ನು ಜಾರಿಗೊಳಿಸಿದೆ ನಗರಸಭೆಯಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸ್ಟೌವ್‌ಗಳನ್ನು ನೀಡಲಾಗುವುದು ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.


ಈ ಯೋಜನೆಯ ಅನುಷ್ಠಾನ ಗೊಳಿಸಲು ೧.೫೦ ಕೋಟಿ ಅನುದಾನ ವನ್ನು ಮೀಸಲಿಡಲಾಗಿದೆ ಮತ್ತು ೧೦೦೦ ಸಾವಿರ ಫಲಾನುಭವಿಗಳಿಗೆ ವಿತರಿಸಲು ನೀರ್ಧಾರಕೈಗೊಳ್ಳಲಾಗಿತ್ತು ಆದರೆ ಫಲಾನುಭವಿಗಳು ಅರ್ಜಿ ಸಲ್ಲಿಸದಿರುವುದರಿಂದ ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲತ್ತುಗಳನ್ನು ಮನೆ ಭಾಗಿಲಿಗೆ ತಲುಪಿಸುವ ಕಾರ್‍ಯವನ್ನು ಮಾಡಲಾಗುವುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ,ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ಪೌರಾಯುಕ್ತ ಅಂಜನೇಯಲು,ವ್ಯಸ್ಥಾಪಕ ಶಶಿಕುಮಾರ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಲಿ ನಗರಸಭೆ ಸದಸ್ಯ ಜಯಪಾಲ್, ನಗರಸಭೆ ಸದಸ್ಯರಾದ ಕರುಣಕರನ್,ಜಯಲಕ್ಷ್ಮಿಭಾಸ್ಕರ್, ರಾಧವಿಜಿಕುಮಾರ್, ಶಾಲಿನಿ ನಂದಕುಮಾರ್, ರಾಜೇಶ್, ರಮೇಶ್, ಮಗಿ ,ಪ್ರಭು, ಪ್ರವೀಣ್, ಪ್ರಸನ್ನ ಹಾಗೂ ಇತರರು ಹಾಜರಿದ್ದರು.