ಜಯನಗರ ಶಿವಮಂದಿರದಲ್ಲಿ ಅದ್ಧೂರಿ ದಸರಾ ಆಚರಣೆ

ಕಲಬುರಗಿ,ಅ.೫: ವಿಜಯದಶಮಿ ಅಂಗವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ,ಬನ್ನಿ ಮುರಿಯುವ ಕಾರ್ಯಕ್ರಮ ನಡೆಯಿತು.
ನಂತರ ಜಯನಗರ ಶಿವಮಂದಿರದಲ್ಲಿ ದಸರಾ ಹಬ್ಬದ ಮಹತ್ವ ಕುರಿತು ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ಮಾತನಾಡಿ ನಾಡ ದೇವತೆ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿ ವಿಜಯಪಡೆದ ದಿನವಾದ ಇಂದು ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ ಎಂದು ಬಣ್ಣಿಸಿದರು.ಅದೇ ರೀತಿ ಶ್ರೀರಾಮನು ರಾವಣನನ್ನು ಜಯಿಸಿದ ದಿನವೂ ಆಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಹಾಗೂ ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ ಅವರು ಮಾತನಾಡಿ ಹಿಂದೂ ಧರ್ಮದ ಸಂಸ್ಕೃತಿಯ ಪ್ರತೀಕ ಇಂಥ ಹಬ್ಬಗಳ ಮಹತ್ವವನ್ನು ನಮ್ಮ ಯುವ ಪೀಳಿಗೆಗೆ ಪರಿಚಯಿಸುವ ಪರಂಪರೆಯನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ತಿಳಿಸಿದರು ಟ್ರಸ್ಟ್ ಕೋಶಾಧ್ಯಕ್ಷ ಬಸವರಾಜ ಮಾಗಿ,ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಮಲ್ಲಯ್ಯ ಸ್ವಾಮಿಗಂಗಾಧರಮಠ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ಭೀಮಾಶಂಕರ ಶೆಟ್ಟಿ, ಗುರುಪಾದಪ್ಪ ಕಾಂತಾ, ಮನೋಹರ ಬಡಶೇಷಿ, ವೀರಪ್ಪ ಹುಡುಗಿ,ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮುಖಂಡರಾದ ವೀರುಪಾಕ್ಷೀ ವಾಲಿ, ಶಿವಪುತ್ರಪ್ಪ ಮರಡಿ,ಅಶೋಕ ಪಾಟೀಲ, ಗುಡಿಯ ಅರ್ಚಕ ವೀರಯ್ಯ ಹಿರೇಮಠ ಸೇರಿದಂತೆ ಅನೇಕರು ಹಿರಿಯರು, ಮಕ್ಕಳು ಭಾಗವಹಿಸಿದ್ದರು.