ಪಟ್ಟಣದ ೨೭ ವಾರ್ಡುಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್

ಅಥಣಿ : ಅ.೨೬:ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಪುರಸಭೆಯ ಎಲ್ಲಾ ೨೭ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಪಟ್ಟಣದ ಸ್ವಚ್ಛತೆಯ ಹಿತದೃಷ್ಟಿಯಿಂದ ನನ್ನ ವ್ಯಾಪ್ತಿಗೆ ಬರುವ ಎಲ್ಲ ಕಲಸ ಕಾರ್ಯಗಳನ್ನು ಶ್ರದ್ಧಾ ಪೂರ್ವಕವಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದು ಪುರಸಭೆ ನೂತನ ಸ್ಥಾಯಿ ಸಮಿತಿಯ ಅಧಕ್ಷ ದತ್ತಾ ವಾಸ್ಟರ ತಿಳಿಸಿದರು.
ಅವರು ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಪುರಸಭೆಯ ೨೭ ವಾರ್ಡ್ ಗಳ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ದತ್ತಾ ವಾಸ್ಟರ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಸೂಚಕರಾಗಿ ವಿಲೀನರಾಜ ಯಳಮಲ್ಲೆ, ಹಾಗೂ ಅನುಮೋದಕರಾಗಿ ಸಂತೋಷ ಸಾವಡಕರ ಅನುಮೋದಿಸಿದರು. ಅಧ್ಯಕ್ಷರು ಸೇರಿದಂತೆ ೧೧ ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ. ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ದತ್ತಾ ವಾಸ್ಟರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು
ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರೆ ಮಾತನಾಡಿ ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಯಗಳನ್ನು ದತ್ತಾ ವಾಸ್ಟರ ಅವರು ಪ್ರಾಮಾಣಿಕಮಾಗಿ ಪಕ್ಷಾತೀತವಾಗಿ ಮಾಡಲಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಜೋಡು ಕೆರೆ ಅಭಿವೃದ್ದಿ, ಭಗೀರಥಿ ನಾಲಾ ಕಾಮಗಾರಿ, ಉದ್ಯಾನವನಗಳ ನಿರ್ವಹಣೆ ಸೇರಿದಂತೆ ೨೭ ವಾರ್ಡುಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾರೆ. ಎಂದ ಅವರು ದತ್ತಾ ವಾಸ್ಟರ್ ಅವರನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಆಯ್ಕೆ ಮಾಡಿದ್ದು ಅವರು ಎಲ್ಲ ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು ಅಥಣಿ ಪಟ್ಟಣವನ್ನು ಸುಂದರ ಪಟ್ಟಣ ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ. ಉಪಾಧ್ಯಕ್ಷ ಭುವನೇಶ್ವರಿ ಯಂಕಚ್ಚಿ, ಹಾಗೂ ಸ್ಥಾಯಿ ಸಮಿತಿಯ ಸದಸ್ಯರಾದ ರಾವಸಾಹೇಬ್ ಐಹೊಳೆ, ಸೈಯದ್ ಅಮೀನ್ ಗದ್ಯಾಳ, ವಿಲೀನರಾಜ ಯಳಮಲ್ಲೆ, ಉದಯಕುಮಾರ
ಸೋಳಸಿ, ಮಲ್ಲೇಶ ಹುದ್ದಾರ, ಕಲ್ಲೇಶ ಮಡ್ಡಿ, ಬಸವರಾಜ್ ಪಾಟೀಲ್, ಶ್ರೀಮತಿ ವಿದ್ಯಾ ಹಳ್ಳದಮಳ, ಸೇರಿದಂತೆ ಪುರಸಭೆ ಸದಸ್ಯರಾದ ರಾಜಶೇಖರ ಗುಡೋಡಗಿ, ಮೃಣಾಲಿನಿ ದೇಶಪಾಂಡೆ, ಶಾಂತಾ ಲೋಣಾರೆ, ಮಲ್ಲಿಕಾರ್ಜುನ ಬುಟಾಳೆ, ಬಸವರಾಜ ನಾಯಿಕ, ವಿದ್ಯಾ ಐಹೊಳೆ. ನಾಮನಿರ್ದೇಶಿತ ಸದಸ್ಯರಾದ ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ, ಮುಸ್ತಾಕ ಮುಲ್ಲಾ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ. ಸುಶೀಲಕುಮಾರ್ ಪತ್ತಾರ. ಆಸೀಫ್ ತಾಂಬೋಳಿ. ಸುಂದರ ಸೌದಾಗರ. ಮಹಾಂತೇಶ ಬಾಡಗಿ. ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು