ಕೆನಡಾ-ಅಮೆರಿಕ ವ್ಯಾಪಾರ ಚರ್ಚೆ ಪುನಾರಂಭ

ಟೊರೊಂಟೊ,ಜೂ.೩೦- ಕೆನಡಾದ ತಂತ್ರಜ್ಞಾನ ಸಂಸ್ಥೆಗಳಿಗೆ ತೆರಿಗೆ ವಿಧಿಸುವ ಯೋಜನೆಯನ್ನು ಅಮೇರಿಕಾ ರದ್ದುಗೊಳಿಸಿದ ನಂತರ, ಕೆನಡಾ – ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳು ಪುನರಾರಂಭಗೊಂಡಿವೆ.


ಟೆಕ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಡೊನಾಲ್ಡ್ ಟ್ರಂಪ್ ಕೊನೆಗೊಳಿಸಿದ ಕೆಲವು ದಿನಗಳ ನಂತರ ಅಮೇರಿಕಾ- ಕೆನಡಾ ವ್ಯಾಪಾರ ಮಾತುಕತೆ ಪುನರಾರಂಭಗೊಂಡಿದ್ದು ಹಲವು ತಿಂಗಳಿನಿಂದ ಎದುರಾಗಿದ್ದ ಸಮಸ್ಯೆ ನಿವಾರಣೆಗೆ ಉಭಯ ದೇಶಗಳು ಮುಂದಾಗಿವೆ.


ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಮೆರಿಕಾದ ಆಧ್ಯಕ್ಷ ಡೊನಾಲ್ಡ್ ಟ್ರಂಪ್, ತಂತ್ರಜ್ಞಾನ ಸಂಸ್ಥೆಗಳ ಮೇಲಿನ ತೆರಿಗೆ ಮುಂದುವರಿಸುವ ಯೋಜನೆಗಳ ಕುರಿತು ಕೆನಡಾದೊಂದಿಗಿನ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದ್ದಾರೆ.


ವ್ಯಾಪಾರ ಒಪ್ಪಂದದ ನಿರೀಕ್ಷೆಯಲ್ಲಿ” ಕೆನಡಾ ಸರ್ಕಾರ ಡಿಜಿಟಲ್ ಸೇವಾ ತೆರಿಗೆ ರದ್ದುಗೊಳಿಸುತ್ತದೆ” ಇದರಿಂದ ಉಭಯ ದೇಶಗಳ ನಡುವೆ ಮಾತುಕತೆ ನಡೆಸಲು ಸಹಕಾರಿಯಾಗಲಿದೆ ಎಂದಿದ್ದಾರೆ.


ಕೆನಡಾದ ಕನನಾಸ್ಕಿಸ್‌ನಲ್ಲಿ ಈ ತಿಂಗಳಲ್ಲಿ ನಡೆದ ಉ-೭: ನಾಯಕರ ಶೃಂಗಸಭೆಯಲ್ಲಿ ನಿಗದಿಪಡಿಸಲಾದ ವೇಳಾಪಟ್ಟಿಯ ಪ್ರಕಾರ, ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.


ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಪ್ರತಿಕ್ರಿಯಿಸಿ ಮೇ ತಿಂಗಳಲ್ಲಿ ಶ್ವೇತಭವನದಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ನಡೆಸಿದ ನಂತರ ಈ ಎರಡೂ ದೇಶಗಳ ನಡುವೆ ವ್ಯಾಪಾರ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ.


ಕೆನಡಾ ಮತ್ತು ಅಮೆರಿಕ ವ್ಯಾಪಾರ ಮಾತುಕತೆಗಳಿಗೆ ೩೦ ದಿನಗಳ ಗಡುವನ್ನು ನಿಗದಿಪಡಿಸಿದ್ದು ಅಷ್ಟರೊಳಗೆ ಉಭಯ ದೇಶಗಳ ನಡುವೆ ವ್ಯಾಪಾರ ಮಾತುಕತೆ ನಡೆಯಲಿದೆ ಎಂದಿದ್ದಾರೆ.


ಕೆನಡಾ ಡಿಜಿಟಲ್ ಸೇವಾ ತೆರಿಗೆಯನ್ನು ವಿಧಿಸುವ ತನ್ನ ಯೋಜನೆಗೆ ಬದ್ಧವಾಗಿದೆ ಎಂದು ಅಮೆರಿಕಕ್ಕೆ ತಿಳಿಸಿದೆ, ಇದು ಕೆನಡಾದಲ್ಲಿ ಆನ್‌ಲೈನ್ ಬಳಕೆದಾರರೊಂದಿಗೆ ತೊಡಗಿಸಿಕೊಳ್ಳುವ ಕೆನಡಾ ಮತ್ತು ವಿದೇಶಿ ವ್ಯವಹಾರಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದೆ.


ಡಿಜಿಟಲ್ ಸೇವಾ ತೆರಿಗೆ ಅಮೆಜಾನ್, ಗೂಗಲ್, ಮೆಟಾ, ಉಬರ್ ಮತ್ತು ಏರ್‌ಬಿಎನ್‌ಬಿ ಸೇರಿದಂತೆ ಕಂಪನಿಗಳಿಗೆ ಕೆನಡಾದ ಬಳಕೆದಾರರಿಂದ ಬರುವ ಆದಾಯದ ಮೇಲೆ ಶೇಕಡಾ ೩ರಷ್ಡು ಲೆವಿ ವಿಧಿಸುವ ಮೂಲಕ ಉಭಯ ದೇಶಗಳ ನಡುವೆ ಸಮಸ್ಯೆ ಎದುರಾಗಿದ್ದು ಅದನ್ನು ಸರಿ ಪಡಿಸಿಕೊಳ್ಳಲು ಉಭಯ ದೇಶಗಳು ಮುಂದಾಗಿವೆ.