
ಟೆಲ್ ಅವೀವಾ, ಜೂ,೩೦- ಕಳೆದ ೨೪ ಗಂಟೆಗಳ ಅವಧಿಯಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಪರಿಣಾಮವಾಗಿ ಕನಿಷ್ಠ ೮೬ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಲ್-ಮವಾಸಿಯ “ಸುರಕ್ಷಿತ ವಲಯ” ಎಂದು ಕರೆಯಲ್ಪಡುವ ನಗರದ ಮೇಲಿನ ದಾಳಿಯಲ್ಲಿ ಮೂವರು ಮಕ್ಕಳೂ ಸೇರಿದಂತೆ ೮೬ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ
ಈ ಹಿನ್ನೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಒಪ್ಪಂದಕ್ಕೆ ಒತ್ತಾಯಿಸಿದ್ದು ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳುವ ಮುನ್ನ ಉತ್ತರ ಗಾಜಾದ ಕೆಲವು ಭಾಗಗಳಿಂದ ಪ್ಯಾಲೆಸ್ಟೀನಿಯನ್ನರನ್ನು ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ.
ಇಸ್ರೇಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳ್ಳುವುದಕ್ಕೆ ಮುಂಚೆ ಗಾಜಾ ನಗರ ಮತ್ತು ಜಬಾಲಿಯಾದ್ಯಂತದ ನೆರೆಹೊರೆಗಳ ಜನರು ಅಲ್-ಮವಾಸಿಯ ಕರಾವಳಿ ಪ್ರದೇಶದ ಕಡೆಗೆ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೂಚಿಸಿದೆ.
ಇಸ್ರೇಲ್ ಮತ್ತು ಗಾಜಾ ನಡುವೆ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡೂ ಕಡೆಯಲ್ಲಿ ಕದನ ವಿರಾಮ ಒಪ್ಪಂದ ಜಾರಿ ಮಾಡಿಕೊಳ್ಳಿ ಮತ್ತು “ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡೋನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ಜೊತೆ ಕದನ ವಿರಾಮದ ಒಪ್ಪಂದದ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ
ಈ ನಡುವೆ ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಅವಿಚೇ ಅಡ್ರೇ ಪ್ರತಿಕ್ರಿಯಿಸಿ ಇಸ್ರೇಲ್ ಮಿಲಿಟರಿ ಉತ್ತರ ಗಾಜಾದಲ್ಲಿ “ಭಯೋತ್ಪಾದಕರು ಮತ್ತು ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ಮೂಲನೆ ಮಾಡಲು” ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ
ಮುಂಜಾನೆ ಗಾಜಾದಲ್ಲಿ ಮಿಲಿಟರಿ ಬಾಂಬ್ ದಾಳಿ ಹೆಚ್ಚಾಗಿದ್ದು, ಹಲವಾರು ಮನೆಗಳು ದ್ವಂಸ ಮಾಡಲಾಗಿದೆ ಕನಿಷ್ಠ ೮೬ ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಹಮಾಸ್ ನಡೆಸುವ ನಾಗರಿಕ ರಕ್ಷಣಾ ಸಂಸ್ಥೆ ಸುದ್ದಿ ಸಂಸ್ಥೆಗಳಿಗೆ ತಿಳಿಸಿದೆ.
ದಕ್ಷಿಣ ನಗರದ ಖಾನ್ ಯೂನಿಸ್ ಬಳಿಯ ಅಲ್-ಮವಾಸಿಯಲ್ಲಿ ಸ್ಥಳಾಂತರಗೊಂಡ ಜನರನ್ನು ಇರಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ