1.35 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜೂ.26-ಮನೆ ಬಾಗಿಲು ಕೊಂಡಿ ಮುರಿದು 1.35 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಕೋಟನೂರ ಮಠದ ಹಿಂದುಗಡೆ ಇರುವ ಶರಣಬಸವೇಶ್ವರ ನಗರದಲ್ಲಿ ನಡೆದಿದೆ.
ವೀಣಾ ನಾಗರಾಜ ಕೋಣಿನ್ ಎಂಬುವವರ ಮನೆಯ ಕೊಂಡಿ ಮುರಿದು ಕಳ್ಳರು ಮನೆಯಲ್ಲಿದ್ದ 1.20 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಲಾಕೇಟ್, 15 ಸಾವಿರ ರೂ.ನಗದು ಸೇರಿ 1.35 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.