ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 24 ಸೂತ್ರ

ಇಂಡಿ:ಜೂ.26:ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಯೊಂದಿಗೆ ಎಲ್ಲ ತರಗತಿಗಳಲ್ಲಿನ ಗುಣಾತ್ಮಕ ಬೋದನಾಕ್ರಮ ಕಲಿಕೆಕ್ರಮಕ್ಕಾಗಿ 2025-26 ನೇ ಶೈಕ್ಷಣಿಕ ವರ್ಷದಲ್ಲಿ 24 ಸೂತ್ರಗಳನ್ನೊಳಗೊಂಡ ಕ್ರಿಯಾ ಯೋಜನೆ ಯನ್ನು ಸಿದ್ದಗೊಳಿಸಿರುವ ತಾಲೂಕು ಶಿಕ್ಷಣ ಇಲಾಖೆ ಅದರ ಅನುಷ್ಠಾನಕ್ಕೆ ಆರಂಭದಿಂದಲೇ ಕ್ರಮ ಕೈಕೊಂಡಿದೆ ಎಂದು ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ ಸಬಾಭವನದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸಲುವಾಗಿ ವಿಶ್ಲೇಷಣೆ ಮತ್ತು ಕ್ರಿಯಾ ಯೋಜನೆ ಹಮ್ಮಿಕೊಳ್ಳುವ ಪ್ರಯುಕ್ತ ನಡೆದ ಸಭೆಯಲ್ಲಿ ಮಾತನಾಡಿದರು.
ಕಳೆÀದ 2024- 25 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 34 ನೇ ಸ್ಥಾನಕ್ಕೆ ಕುಸಿದಿತ್ತು.ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಎಲ್ಲ ಮುಖ್ಯೋಪಾದ್ಯಾಯರ ಸಭೆ ನಡೆಸುವ ಮೂಲಕ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಅಲ್ಲದೇ ಹಲವು ಮಾರ್ಗಸೂಚಿ ಪಾಲಿಸುವಂತೆ ನಿರ್ದೇಶಿಸಿದ್ದರು.ಹೀಗಾಗಿ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಆರಂಭದಿಂದಲೇ ಕಲಿಕಾ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡುವದರೊಂದಿಗೆ 20 ಕ್ಕೂ ಹೆಚ್ಚು ಸೂತ್ರಗಳನ್ನು ಸಿದ್ದಪಡಿಸಿಕೊಂಡಿದೆ.
ಮೊದಲನೆಯದಾಗಿ ಈ ಹಿಂದಿನ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕುರಿತು ವಿಶ್ಲೆಷಣೆ ಮಾಡಿಕೊಳ್ಳುವದು . ಮರು ಸಿಂಚನ ಪ್ರಾಯೋಗಿಕ ಕಾರ್ಯಕ್ರಮದ ಫಲವನ್ನು ವಿಶ್ಲೇಷಿಸುವದು, ಸೇತುಬಂದ ಕಾರ್ಯಕ್ರಮ ಅನುಷ್ಠಾನ ಹಾಗೂ ಅನುಪಾಲನೆ ಬಗ್ಗೆ ಪರಿಶೀಲಿಸಿವದು, ವಿದ್ಯಾರ್ಥಿಗಳ ವೈಯಕ್ತಿಕ ಮಾರ್ಗದರ್ಶನಕ್ಕಾಗಿ ನಿಗದಿತ ವಿದ್ಯಾರ್ಥಿಗಳ ಹಾಜರಿ ಮತ್ತು ಪ್ರಗತಿ ಅವಲೋಕಿಸುವದು, ಅಲ್ಲದೆ ಶಾಲಾ ಶ್ರೇಣಿ ದತ್ತು ನೀಡುವಿಕೆ ಕ್ರಮ ಅನುಸರಿಸುವದು ಸೂಕ್ತ ಕಲಿಕಾ ಚಟುವಟಿಕೆಗಳ ಆಯೋಜನೆ ಮಾಡುವದು ಪರೀಕ್ಷಾ ಸ್ವರೂಪ ಘಟಕವಾರು ಮಹತ್ವದ ಪರಿಚಯ ಪರೀಕ್ಷಾ ಸಿದ್ದತೆ ಅಭ್ಯಾಸದ ಬಗ್ಗೆ ಸಲಹೇ ನೀಡುವದು. ತಾಲೂಕು ಹಂತದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಮಾಲೋಚನೆ ನಡೆಸುವದು, ವಿದ್ಯಾರ್ಥಿಗಳ ಅಭಿರುಚಿ ಸಮೀಕ್ಷೆ ಸಡೆಸುವದು ದತ್ತಾಂಶ ವಿಶ್ಲೇಷಿಸುವದು ವಿಷಯವಾರು ಫಲಿತಾಂಶ ಅವಲೋಕಿಸಿ ವಿಶ್ಲೇಷಿಸುವದು ಮಾಸಿಕ ಪೆÇೀಷಕರ ಸಭೆ ನಡೆಸುವದು ಮನೆಗಳ ಭೇಟಿ ರಸಪ್ರಶ್ನೆ ಇತರೆ ಚಟುವಟಿಕೆ ಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಹುರುದುಂಬಿಸುವಂತಹ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಎಂದರು.

ವೇದಿಕೆಯ ಮೇಲೆ ಕ್ಷೇತ್ರ ಸಮನ್ವಯ ಆಧಿಕಾರಿ ಎಸ್.ಆರ್.ನಡಗಡ್ಡಿ, ಹಣಮಂತ ಮಾಳಗೊಂಡ, ಹೊಸಮನಿ ಪ್ರೌಢಶಾಲೆ ದೈಹಿಕ ಶಿಕ್ಷಕ ಸಂಘÀದ ಅಧ್ಯಕ್ಷರು, ಪ್ರಕಾಶ ಐರೋಡಗಿ ಮತ್ತಿತರಿದ್ದರು.

ಕಳೆದ ಸಾಲಿನ ಫಲಿತಾಂಶದ ಬಗ್ಗೆ ಅವಲೋಕನ ನಡೆದಿದೆ. ಅಲ್ಲದೆ ಹೊಸ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಗುಣಮಟ್ಟ ವೃದ್ದಿಯೊಂದಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳಲಾಗಿದ್ದು ಕೆಲವು ಸೂತ್ರಗಳ ಅನ್ವಯ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ.
ಇ.ಓ.ಹೂಗಾರ
ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ ಅಧಿಕಾರಿ, ಇಂಡಿ