
ಕೋಲಾರ, ಜೂ,೧೮-ಜಿಲ್ಲಾ ಔಷಧಿ ನಿಯಂತ್ರಕರಿಗೆ ಔಷಧಿ ಮಳಿಗೆಗಳಿಗೆ ಭೇಟಿ ನೀಡಿ ಡ್ರಗ್ಸ್ ಮಾರಾಟ ಬಗ್ಗೆ ವರದಿ ಮಾಡುವಂತೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಿ ಯೋಜನೆಗಳನ್ನು ನೀಡಲು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಸೂಚಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಕಾರ್ಯಕ್ರಮ ಹಾಗೂ ತೀವ್ರತರ ಅತೀಸಾರ ಭೇದಿ ತಡೆಗಟ್ಟುವ ಅಭಿಯಾನ, ದಢಾರ-ರುಬೆಲ್ಲಾ ಏಲಿಮಿನೇಷನ್-೨೦೨೫ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಏಡ್ಸ್ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಯೋಜನೆಗಳಾದ ಹೆಚ್.ಐ.ವಿ. ಸೊಂಕಿತ ಮಹಿಳೆಯರಿಗೆ ಧನಶ್ರೀ ಯೋಜನೆ, ಹೆಚ್.ಐ.ವಿ. ಸೋಂಕಿತ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯ, ಹೆಚ್.ಐ.ವಿ. ಸೋಂಕಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆ, ಪುನರ ವಸತಿ ಯೋಜನೆ ಹಾಗೂ ಮೈತ್ರಿಯೋಜನೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಚೇತನಯೋಜನೆ ಲೈಂಗಿಕ ಕಾರ್ಯಕರ್ತೆಯರಿಗಾಗಿ ಸೇವೆಗಳನ್ನು ನೀಡಲಾಗುತ್ತಿದೆ.
ಹಾಗೂ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಒಟ್ಟು-೪೪೭೬ ಇವರಲ್ಲಿ ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ೬೯. ಸಕ್ರಿಯವಾಗಿರುವ ಪುರುಷ ಲೈಂಗಿಕ ಕಾರ್ಯಕರ್ತೆರು(ಎಂ.ಎಸ್.ಎಂ) ಒಟ್ಟು- ೩೪೮೦, ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ-೫೯ ಸೂಜಿ ಸಿರಂಜ್‌ಗಳಿಂದ ಡ್ರಗ್ಸ್ ತೆಗೆದುಕೊಳ್ಳುವವರ ಸಂಖ್ಯೆ – ೧೨೯೮ ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ-೦೮ ಎಂಬ ಮಾಹಿತಿಯನ್ನು ಏಡ್ಸ್ ನೋಡಲ್ ಅಧಿಕಾರಿಗಳಾದ ಡಾ|| ಜಿ. ಪ್ರಸನ್ನಕುಮಾರ ಸಭೆಯಲ್ಲಿ ತಿಳಿಸಿದರು.
ಡಾ|| ಮೀಸ್ಬಾ, ಪೋಲಿಯೋ ಸರ್ವೇಕ್ಷಣಾಧಿಕಾರಿಗಳು ಮಾತನಾಡಿ ಲಸಿಕಾ ಕಾರ್ಯಕ್ರಮ ಪ್ರಗತಿಯ ಬಗ್ಗೆ ತಿಳಿಸಿದರು ಹಾಗೂ ಎಂ.ಆರ್. ಪೂರ್ಣ ಪ್ರಮಾಣ ಲಸಿಕೆಯ ಮಾಹಿತಿಯನ್ನು ನೀಡಿದರು.
ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮ ವಹಿಸುವುದು ಮತ್ತು ಎಲ್ಲಾ ೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವಂತೆ ಕ್ರಮ ವಹಿಸುವುದು.
ದಡಾರ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಹಾಗೂ (ಔuಣ bಡಿeಚಿಞಡಿesಠಿoಟಿse vಚಿಛಿಛಿiಟಿಚಿಣioಟಿ) ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಹಕರಿಸುವುದು ಮತ್ತು ಎಲ್ಲಾ ೫ ವರ್ಷದೊಳಗಿನ ಮಕ್ಕಳಿಗೆ ವಿಟಮಿನ್-ಎ ನೀಡಲು ಸಹಕರಿಸುವುದು ಹಾಗೂ ಎಲ್ಲಾ ಮಕ್ಕಳು ದಢಾರ ರುಬೆಲ್ಲ ಲಸಿಕೆ ಜೊತೆ ವಿಟಮಿನ್-ಎ ಪಡೆದಿರುವ ಕುರಿತು ಖಾತರಿಪಡಿಸಿಕೊಳ್ಳುವುದು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಅರ್ಹ ಎಲ್ಲಾ ಮಕ್ಕಳು ದಢಾರ ರುಬೆಲ್ಲಾ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿರುವ ಕುರಿತು ಖಾತರಿಪಡಿಸಿಕೊಳ್ಳುವುದು.
ತಾಯಂದಿರ ಸಭೆಗಳಲ್ಲಿ ಬಾಲವಿಕಾಸ ಸಮಿತಿ ಸಭೆಗಳಲ್ಲಿ ಎರಡೂ ಡೋಸ್ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಪಡೆಯುವ ಮಹತ್ವದ ಕುರಿತು ಮಾಹಿತಿ ನೀಡುವುದು ಮತ್ತು ಸ್ತ್ರೀಶಕ್ತಿ ಗುಂಪುಗಳು ಮಕ್ಕಳನ್ನು ಲಸಿಕೆ ಹಾಕಿಸಲು ಮಕ್ಕಳನ್ನು ಕರೆತರುವುದು.
ಸಿಡಿ.ಪಿ.ಓಗಳು ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾಗಿದ್ದು, ಮೇಲ್ವಿಚಾರಣೆ ನಡೆಸುವುದು ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದಟಾಸ್ಕ ಪೋರ್ಸ್ ಸಭೆಗಳಲ್ಲಿ, ಮೇಲ್ವಿಚಾರಣಾ ವರದಿಯನ್ನು ಪ್ರಸ್ತುತಪಡಿಸಿ ಸೂಕ್ತ ಕ್ರಮಗಳ ಕುರಿತು ಚರ್ಚಿಸುವುದು.
ಯಾವುದೇ ಶಂಕಿತ ದಢಾರರು ಬೆಲ್ಲಾ ಪ್ರಕರಣ ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತೀವ್ರತರ ಅತೀಸಾರ ಬೇಧಿ ತಡೆಗಟ್ಟುವ ಅಭಿಯಾನ ಕಾರ್ಯಕ್ರಮದ ಬಗ್ಗೆ ಡಾ|| ಚಾರಿಣಿ ಎಂ.ಎ. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಮಾತನಾಡಿ ದಿನಾಂಕ: ೧೬.೦೬.೨೦೨೫ ರಿಂದ ೩೧.೦೭.೨೦೨೫ ವರೆಗೆ ಆಚರಿಸಲಾಗುತ್ತಿದ್ದು, ನಿಮ್ಮ ಮಗು ಮೂರು ಅಥವಾ ಹೆಚ್ಚು ಬಾರಿ ಭೇದಿ ಮಾಡಿಕೊಂಡರೆ ಅತಿಸಾರ ಬೇಧಿ ಎನ್ನುವರು.
ಆದುದರಿಂದ ೫ ವರ್ಷದೊಳಗಿನ ಮಕ್ಕಳಿರುವ ಎಲ್ಲಾ ಮನೆಗಳಿಗೆ ಓ.ಆರ್.ಎಸ್. ಪಟ್ಟಣಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ನೀಡಲಾಗುವುದು ಹಾಗೂ ಅತೀಸಾರ ಬೇಧಿಯಿಂದ ಸಂಬಂಭವಿಸುವ ಮರಣ ತಡೆಗಟ್ಟುಲು ಅವಶ್ಯವಿರುವ ಸಮಯದಲ್ಲಿ ಓ.ಆರ್.ಎಸ್. ಮತ್ತು ಜಿಂಕ್ ಮಾತ್ರೆಗಳನ್ನು ನೀಡುವುದರಿಂದ ಮರಣವನ್ನು ತಡೆಗಟ್ಟುಬಹುದು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಉಪಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಓ.ಆರ್.ಎಸ್. ಕಾರ್ನರ್ ಮಾಡಲಾಗಿದೆ. ಎಲ್ಲಾ ಪೋಷಕರಿಗೆ ಶುದ್ಧಕುಡಿಯುವ ನೀರು, ಎದೆ ಹಾಲಿನ ಮಹತ್ವ, ಪೌಷ್ಠಿಕ ಆಹಾರ ಸೇವನೆ, ಶೌಚಾಲಯ ಬಳಸುವುದು ಹಾಗೂ ಕೈ ತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಆರೋಗ್ಯ ಶಿಕ್ಷಣ ನೀಡುವುದರಿಂದ ನಮ್ಮ ಜಿಲ್ಲೆಯಲ್ಲಿ ಅತೀಸಾರ ಭೇದಿಯಿಂದ ಮರಣ ಹೊಂದುವ ಮಕ್ಕಳನ್ನು ರಕ್ಷಿಸಬಹುದೆಂದು ತಿಳಿಸಿದರು. ಬಂಗಾರಪೇಟೆ-೬೯೬, ಕೋಲಾರ೫೬೪, ಮಲೂರು-೪೨೯, ಮುಳಬಾಗಿಲು-೫೫೮, ಶ್ರೀನಿವಾಸಪುರ-೪೩೪ ಸಂಖ್ಯೆಯಲ್ಲಿ ಓ.ಆರ್.ಎಸ್./ ಜಿಂಕ್ ಕಾರ್ನರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
೦-೫ ವರ್ಷದೊಳಗಿನ ಮಕ್ಕಳು ಅತೀಸಾರ ಬೇಧಿಯಿಂದ ಮರಣವಾಗದಂತೆ ತಡೆಗಟ್ಟಲು ಸಂಬಂಧಿಸಿದ ಇಲಾಖೆಗಳು ಸಹಕಾರ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮೀಸ್ಬಾ, ಎಸ್.ಎಂ.ಓ., ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದರು.