ಕಲಬುರಗಿ,ಮೇ.೨೭-ನಗರದ ವಾರ್ಡ್ ನಂ.೩೮ರಲ್ಲಿ ಬರುವ ಧನಗರಗಲ್ಲಿಯ ಕೋರಿಮಠ ಹನುಮಾನ ದೇವಸ್ಥಾನದ ಹತ್ತಿರವಿರುವ ಬೋರವೆಲ್ ಪಕ್ಕದಲ್ಲಿ ದೊಡ್ಡ ಟಾಕಿ ನಿರ್ಮಿಸಬೇಕು ಮತ್ತು ಬಡಾವಣೆಗೆ ಕಸ ವಿಲೇವಾರಿಯ ದೊಡ್ಡ ವಾಹನ ಕಳುಹಿಸಬೇಕು ಎಂದು ಬಡಾವಣೆಯ ನಾಗರಿಕರಾದ ಶಿವಾಜಿ ಪಟ್ಟಣ ಮತ್ತು ರಾಜೇಂದ್ರ ಕುಲಕರ್ಣಿ ಅವರು ಮನವಿ ಮಾಡಿದ್ದಾರೆ.
ಈ ಸಂಬAಧ ಅವರು ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಧನಗರಗಲ್ಲಿಯ ಕೋರಿಮಠ ಹನುಮಾನ ದೇವಸ್ಥಾನದ ಹತ್ತಿರವಿರುವ ಕುಡಿಯುವ ನೀರಿನ ಬೋರವೆಲ್ ನೀರು ಪೋಲಾಗುತ್ತಿದ್ದು, ನೀರು ಪೋಲಾಗದಂತೆ ತಡೆಯಲು ಬೋರವೆಲ್ ಪಕ್ಕದಲ್ಲಿ ದೊಡ್ಡ ಟಾಕಿ ನಿರ್ಮಿಸಬೇಕು ಮತ್ತು ಬಡಾವಣೆಯಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕಸವಿಲೇವಾರಿಯ ದೊಡ್ಡ ವಾಹನ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.