ಮಣ್ಣು, ನೀರು ಸಂರಕ್ಷಣೆ ಅಗತ್ಯ: ಬಸವರಾಜ ಕುಂಬಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.೨೬: ಸೃಷ್ಟಿಯು ಕೊಡಮಾಡಿದ ಅಮೂಲ್ಯ ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡುವ ಕತ೯ವ್ಯ ನಮ್ಮದಾಗಬೇಕು. ಇಂದು ವಿಜಯಪುರ ಜಿಲ್ಲೆಯ ಕೃಷಿ ತೋಟಗಾರಿಕೆ ತುಂಬ ಉಪಯುಕ್ತವಾಗಿದೆ. ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು. ಕೃಷಿಕರಿಗೆ ಯಂತ್ರೋಪಕರಣಗಳ ಬಳಕೆಯಿಂದ ವ್ಯವಸಾಯಕ್ಕೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಸವರಾಜ ಕುಂಬಾರ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ಕಸಾಪ ಸಭಾಂಗಣದಲ್ಲಿ ಜರುಗಿದ ದತ್ತಿ ನಿಧಿ ಕಾರ್ಯಕ್ರಮ ಜಿಲ್ಲಾ. ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ದತ್ತಿ ನಿಧಿ ೧ ) ಗುರುಬಾಯಿ ಬಸನಗೌಡ ಪಾಟೀಲ ದತ್ತಿ. ದತ್ತಿ ದಾನಿಗಳು ಬಸನಗೌಡ ಸೋಮನಗೌಡ ಪಾಟೀಲ ವಿಷಯ : ಆಧುನಿಕ ಕೃಷಿ ಅವಿಷ್ಕಾರ ಕುರಿತು ಚಚೆ೯. ೨ ) ಜ ಚ ನಿ ದತ್ತಿ ದತ್ತಿ ದಾನಿಗಳು ಜಿ ಎಸ್ ಹಿರೇಮಠ ಹಾಗು ಬಿ ಪಿ ಹಿರೇಮಠ ಕಾಗದ ವ್ಯಾಪಾರಿಗಳು. ವಿಷಯ :ಚ ನಿ ಅವರ ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವರಾಜ ಕುಂಬಾರ, ನಗರೀಕರಣ ಬೆಳೆದಂತೆ ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಕೆರೆಗಳನ್ನು ಹಾಗೂ ಬಾಂದಾರಗಳನ್ನು ನಿಮಿ೯ಸಿ ಅಮೂಲ್ಯವಾದ ಮಳೆ ನೀರನ್ನು ಪೋಲಾಗದಂತೆ ಕೃಷಿಕರು ಗಮನಿಸಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದಲಿಂಗ ಮನಹಳ್ಳಿ ಮಾತನಾಡಿ, ಕೃಷಿಯಲ್ಲಿ ಅನೇಕ ಅವಿಷ್ಕಾರಗಳನ್ನು ಕಂಡು ಹಿಡಿದರೂ ನಾವು ಸಾವಯವ ಗೊಬ್ಬರ ಬಳಕೆ ಮಾಡಬೇಕು. ಜಚನಿ ಶ್ರೀಗಳು ವಿಜಯಪುರ. ತಿಕೋಟಾ. ಬಸವನಬಾಗೇವಾಡಿ ಮುಂತಾದ ಕಡೆಗೆ ಪ್ರವಚನ ನೀಡಿದ್ದಾರೆ. ಅವರು ನೂರಾರು ಪುಸ್ತಕ ಬರೆದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ಆಧುನಿಕ ಕೃಷಿಯಲ್ಲಿ ಅವಿಷ್ಕಾರ ವಿಷಯ ಕುರಿತು ಪ್ರೊ. ಶರಣಗೌಡ ಪಾಟೀಲ ಉಪನ್ಯಾಸ ನೀಡಿ, ನಮ್ಮ ಪೂರ್ವಜರು ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಆಹಾರ ಧಾನ್ಯ ಬೆಳೆಯುತ್ತಿದ್ದರು. ಇಂದು ಪ್ರತಿಯೊಂದು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯು ತನ್ನ ಸತ್ವವನ್ನು ಕಳೆದುಕೊಂಡಿದೆ. ಅನೇಕ ನೀರಾವರಿ ಭೂಮಿ ಜವಳು ಹತ್ತಿ ಹಾಳಾಗಿದೆ. ಜವಳು ಆಗದಂತೆ ಎಚ್ಚರ ವಹಿಸಿ ಕೃಷಿ ಮಾಡುವದು ಅತ್ಯವಶ್ಯ ಎಂದರು
ಜಚನಿಯವರ ಕನ್ನಡ ಸಾಹಿತ್ಯದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕುರಿತು ಸಾಹಿತಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿ, ಜಚನಿಯವರಿಗೆ ಶಬ್ದ ಬ್ರಹ್ಮ. ಮರು ಬ್ರಹ್ಮ ಎಂದು ಕರೆಯುತ್ತಿದ್ದರು. ಆರು ಸಾವಿರ ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯತೆ, ದೇಶ ಪ್ರೇಮ, ನಾಡು ನುಡಿಗೆ ಪ್ರಾಧ್ಯಾನತೆ ನೀಡಿದರು. ವಿಜ್ಞಾನದ ಮಹತ್ವ ಸಾರುವ ವಚನಗಳನ್ನು ರಚಿಸಿದ್ದಾರೆ. ಕವನ, ವಚನ, ಲೇಖನ ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು ಸ್ಮರಣೀಯ ಎಂದರು.
ಕಸಾಪ ಪದಾಧಿಕಾರಿಗಳಾದ ರವಿ ಕಿತ್ತೂರ. ವಿಜಯಲಕ್ಷ್ಮಿ ಹಳಕಟ್ಟಿ ಮುಂತಾದವರು ಅತಿಥಿಗಳಾಗಿ ಮಾತನಾಡಿದರು. ಶಶಿಕಲಾ ಇಜೇರಿ ಅಶೋಕ ಗುಡದಿನ್ನಿ ನಾಗರಾಜ ಹೊಸಳ್ಳಿ ಕಸಾಪ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲಿದ್ದರು.
ಡಾ. ಸುರೇಖಾ ರಾಠೋಡ ಸ್ವಾಗತಿಸಿದರು. ಡಾ. ಶೈಲಾ ಬಳಗಾನೂರ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಹಾಸಿಂಪೀರ ವಾಲಿಕಾರ ಮಾತನಾಡಿದರು. ಶೋಭಾ ಬಡಿಗೇರ ವಂದಿಸಿದರು
ಕಾರ್ಯಕ್ರಮದಲ್ಲಿ ಬಿ.ಎಮ್. ಆಜೂರ. ವಿ.ಎಸ್. ಖಾಡೆ, ಎನ್.ಆರ್. ಕುಲಕರ್ಣಿ, ಎಸ್.ಎಮ್. ಕಣಬೂರ, ಶಂಕರ ಅಬಸವಪ್ರಭು, ಯು.ಎನ್. ಕುಂಟೋಜಿ, ಜಿ.ಎಸ್. ಬಳ್ಳೂರ, ಭಾಗೀರಥಿ ಸಿಂಧೆ, ಪಖ್ರುದ್ದೀನ ಶೇಖ, ಪರವೀನ ಶೇಖ, ಶಿವಾಜಿ ಮೋರೆ, ಅಮಸಿದ್ದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.