ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಮೇ 23 :- ದೊಡ್ಡಿಂದುವಾಡಿ ಗ್ರಾಮದ ಕನಕಗಿರಿ ಶ್ರೀ ಗುಡ್ಡದ ಮಾರಮ್ಮ ದೇವಸ್ಥಾನಕ್ಕೆ ಸುತ್ತುಗೋಡೆ ನಿರ್ಮಾಣ ಮತ್ತು ಸರ್ಕಲ್ ಬಳಿ ಹೆಬ್ಬಾಗಿಲು ನಿರ್ಮಾಣ ಮಾಡಿಕೊಡುವಂತೆ ಶಾಸಕ ಎಂ.ಆರ್ ಮಂಜುನಾಥ್ ಅವರಿಗೆ ಅರ್ಚಕರು ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ದೊಡ್ಡಿಂದುವಾಡಿ ಗ್ರಾಮದ ಕನಕಗಿರಿ ಶ್ರೀ ಗುಡ್ಡದ ಮಾರಮ್ಮ ದೇವಸ್ಥಾನಕ್ಕೆ ಮಂಗಳವಾರ ಮತ್ತು ಶುಕ್ರವಾರ ಹಬ್ಬ ವಿಶೇಷ ದಿನಗಳಲ್ಲಿ ಇಲ್ಲಿಗೆ ಸಾವಿರಾರು ಭಕ್ತಾದಿಗಳು ಆಗಮಿಸಿ ಮಾರಮ್ಮ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಭಾಗದ ಸುತ್ತಮುತ್ತಲ ಜನರ ಆರಾಧ್ಯದೈವಿಯಾಗಿ ನೆಲೆಸಿರುತ್ತಾಳೆ.
ಮಾರಮ್ಮ ದೇವಿಯ ದೇವಾಲಯದ ಸುತ್ತು ಮುತ್ತ ಹೆಚ್ಚಿನ ಗಿಡಮರಗಳು ಆವೃತವಾಗಿದೆ. ಹಾಗಾಗೇ ಪ್ರಾಣಿಗಳು ಹಾವಳಿ ಇರುತ್ತದೆ. ಇಲ್ಲಿ ಬರುವ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ದೇವಸ್ಥಾನದ ಸುತ್ತಲೂ ಸುತ್ತು ಗೋಡೆ ನಿರ್ಮಾಣ ಮಾಡಿ ಕೊಡಬೇಕು. ಜೊತೆಗೆ ಅರಳಿ ಕಟ್ಟೆ ಸುತ್ತಲೂ ಕಟ್ಟೆ ನಿರ್ಮಾಣ ಮಾಡಿ ಕೊಡಬೇಕು.
ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆ ದೊಡ್ಡಿದುವಾಡಿ ಗ್ರಾಮದ ಜಿ.ವಿ ಗೌಡ ಸರ್ಕಲ್ ಬಳಿಯಿಂದ ಗುಡ್ಡದ ಮಾರಮ್ಮ ದೇವಸ್ಥಾನಕ್ಕೆ ತೆರಳುವಾಗ ಸರ್ಕಲ್ ಬಳಿ ಹೆಬ್ಬಾಗಿಲು ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಮಾನಸ ಟ್ರಸ್ಟ್ ನ ದತ್ತೇಶ್ ಮತ್ತು ದೇವಸ್ಥಾನದ ಅರ್ಚಕರು ಜೇಡೆಸ್ವಾಮಿ, ಗ್ರಾಮ ಪಂ. ಅಧ್ಯಕ್ಷ ಶಿವರುದ್ರಸ್ವಾಮಿ, ಸದಸ್ಯರು ನಾಗಭೂಷಣ, ಮುಖಂಡರಾದ ಡಿ.ಪಿ ಗೋವಿಂದ, ರುದ್ರ ಮಾದಶೆಟ್ಟಿ, ಮಹೇಶ್, ಗುರುಸ್ವಾಮಿ, ಬಲಲಿಂಗ ಶೆಟ್ಟಿ, ಜವರಯ್ಯ ಮಾದಶೆಟ್ಟಿ, ಶಿವಸ್ವಾಮಿ, ಗೌಡಗೆರೆ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.