ಕಂಟೈನರ್ ಲಾರಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ – 15 ಜನರಿಗೆ ಗಾಯ

ಪಡುಬಿದ್ರಿ-ಪೆಟ್ರೋಲ್ ಪಂಪ್‌ವೊಂದರ ಬಳಿ ಟೆಂಪೋ ಟ್ರಾವೆಲರ್(ಟಿಟಿ) ವಾಹನವೊಂದು ರಾಷ್ಟ್ರೀಯ ಹೆದ್ದಾರಿ ೬೬ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿ ನಾಲ್ವರು ಮಕ್ಕಳ ಸಹಿತ ಕೇರಳ ಮೂಲದ ಸುಮಾರು ೧೫ ಮಂದಿ ಗಾಯಗೊಂಡ ಘಟನೆ ನಡೆದಿದೆ.
ಟಿಟಿ ಚಾಲಕ ಜಿತಿನ್ ಕೆ. ಪಿ. ಸಹಿತ ಬೇಬಿ ನಿಹಾಲ್ (೩), ಮಾಸ್ಟರ್ ನಾವಿಕ್ (೪), ಧನ್ವಿಷ್ (೬), ಬೇಬಿ ಅಲಂಕೃತಾ (೮) ಶೃತಿ (೩೩), ರಮ್ಯಾ(೪೩), ಐಶ್ವಯಾ (೩೫), ಸುಮತಿ (೫೪), ಮಾಳವಿಕಾ (೨೮), ಶಾಂತಾ (೫೬) ವಿನಿತ್ (೩೩), ಶರತ್ (೩೪), ಅಶ್ರಫ್ (೫೧), ರಂಜಿತ್ (೩೮), ವಿನೀಷ್(೩೮) ಗಾಯಗೊಂಡವರು. ಅವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.