ವಿಜಯಪುರ,22:ಪ್ರಸಕ್ತ ಸಾಲಿನ ಅಖಿಲ ಭಾರತ ಮಟ್ಟದ ವಿಜ್ಞಾನ ಪರೀಕ್ಷೆಯಲ್ಲಿ ಮಹಾರಾಷ್ರ್ಟದ ನಾಂದೇಡ ನಗರದ ನಾಗಾರ್ಜುನ ಪಬ್ಲಿಕ್ ಸ್ಕೂಲಿನಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಶಾಶ್ವತ ಕೆಸರಾಳೆ ನೂರಕ್ಕೆ ನೂರರಷ್ಟು ಅಂಕ ಪಡೆಯುವ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ವಿಜಯಪುರದ ರಾಜಾಜಿನಗರದ ನಿವಾಸಿ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಅವರ ಮೊಮ್ಮಗ ಶಾಶ್ವತ ರಾಷ್ರ್ಟಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾನೆ.
ಮೇ 17 ರಂದು ಹೈದರಾಬಾದಿನ ನ್ಯಾಷನಲ್ ಲೇವಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಎಕ್ಷಾಮಿನೇಷನ್ ಯುನಿಫೈಡ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡ ರಾಷ್ರ್ಟಮಟ್ಟದ ಎನಿವಲ್ ಅವಾರ್ಡ್ ಸೆಲಿಬ್ರೇಷನ್ ಸಮಾರಂಭದಲ್ಲಿ ಈ ವಿದ್ಯಾರ್ಥಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಾರಾಷ್ರ್ಟದ ಮಹಿಳಾ ಮತ್ತು ಮಕ್ಕಳ ಪಂಚಾಯತ್ ರಾಜ್ಯ ಸಚಿವೆ ಧನಶ್ರೀ ಅನಸೂಯ ಅಧ್ಯಕ್ಷತೆ ವಹಿಸಿದ್ದರು. ನಟ ಕೆ.ವಿ.ಪ್ರಸಾದ ಹಾಗೂ ಎಚ್.ಆರ್.ಡಿ.ಟ್ರೇನರ್ ಮನೋತಜ್ಞ ಡಾ. ಬಿ.ವಿ.ಪಟ್ಟಾಭಿರಾಮ ವಿಜೇತ ವಿದ್ಯಾರ್ಥಿಗೆ ಗೋಲ್ಡ್ ಮೆಡಲ್, ಪದಕ, ಲ್ಯಾಪ್ ಟಾಪ್ ಹಾಗೂ 50,000 ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದರು.
ದೇಶಕ್ಕೆ ಪ್ರಥಮ ಸ್ಥಾನ ಬಂದಿರುವ ವಿದ್ಯಾರ್ಥಿಯ ಸಾಧನೆಗೆ ನಾಂದೇಡದ ನಾಗಾರ್ಜುನ ಪಬ್ಲಿಕ್ ಸ್ಕೂಲಿನ ಗುರುವೃಂದ, ವಿಜಯಪುರದ ಪ್ರಗತಿ ಶಾಲೆಯ ಆಡಳಿತಾಧಿಕಾರಿ ಸಾಹಿತಿ ಸಿದ್ಧಲಿಂಗ ಮನಹಳ್ಳಿ, ಸಂಗಮೇಶ ಮನಹಳ್ಳಿ, ಸೌಜನ್ಯ ಲಿಂಗದಳ್ಳಿ, ತಂದೆ ಡಾ. ಸಂತೋಷ, ತಾಯಿ ಡಾ. ಸುನಂದಾ, ಅಜ್ಜಿ ಗೌರಾಬಾಯಿ, ಪ್ರಗತಿ ಶಾಲೆಯ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ರಾಜಾಜಿನಗರದ ಬಸವೇಶ್ವರ ಸೇವಾ ಸಮಿತಿ ಸದಸ್ಯರು ಈ ಮಗುವಿನ ಸಾಧನೆಯನ್ನು ಪ್ರಶಂಸಿಸಿದ್ದಾರೆ.