ಕಲಬುರಗಿ,ಮೇ.19: ವ್ಯಕ್ತಿಯೊಬ್ಬನ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಅಪರಾಧಿಗೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದೆ.ಚನ್ನವೀರ ನಗರದ ನಿವಾಸಿ ಮಂಜುನಾಥ ಶಿವಕುಮಾರ ಮಠಪತಿ ಶಿಕ್ಷೆಗೊಳಗಾದವ.
ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ಸಂಶಯದಿಂದ
ಪ್ರಶಾಂತ ಅಲಿಯಾಸ್ ಪಿಂಟ್ಯಾ ಕುಂಬಾರ ಧನ್ನೂರ ( ಬಸವಕಲ್ಯಾಣ) ಎಂಬಾತನನ್ನು 2023ರ ಜನವರಿ 4 ರಂದು ಮಚ್ಚು, ಕಲ್ಲಿನಿಂದ ಹೊಡೆದು ಮಂಜುನಾಥ ಕೊಲೆ ಮಾಡಿದ್ದ.ಆರೋಪಿತನ ವಿರುದ್ಧ ಚೌಕ ಪೆÇಲೀಸ ಠಾಣೆಯ ಆರಕ್ಷಕ ನಿರೀಕ್ಷಕರಾಗಿದ್ದ ರಾಜಶೇಖರ ಹಳಿಗೋಧಿ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು
ವಾದ ವಿವಾದಗಳನ್ನು ಆಲಿಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹ್ಮದ ಮುಜೀರ ಉಲ್ಲಾ ಅವರು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ, ಅವರು ವಾದ ಮಂಡಿಸಿದ್ದರು.