ಚಿಂಚೋಳಿ:ಮೇ.18: ವಿವಿಧ ಕಾಮಗಾರಿಗಳ ಬಗೆಗೆ ವೀಕ್ಷಣೆ ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಊಟದ ವಿರಾಮಕ್ಕೆಂದು ತಾಲ್ಲೂಕಿನ ಚಂದಾಪುರ ಪಟ್ಟಣದ ಹೊರವಲಯದಲ್ಲಿರುವ ಪೆÇೀಲಕಪಳ್ಳಿ ಪ್ರವಾಸಿ ಮಂದಿರಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ತಹಸೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಚಂದಾಪುರ ಆಶ್ರಯ ಕಾಲೋನಿಯ ಸರಿ ಸುಮಾರು 85 ಜನರು ಜಿಲ್ಲಾಧಿಕಾರಿಗಳ ಕಾರನ್ನು ನಿಲ್ಲಿಸಿ ತಮ್ಮ ಸಮಸ್ಯೆಯನ್ನು ಬಗೆ ಹರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಚಿಂಚೋಳಿಯ -ತಾಂಡೂರ ಮುಖ್ಯ ರಸ್ತೆಯಿಂದ ಚಂದಾಪೂರದ ಆಶ್ರಯ ಕಾಲೋನಿ ಮತ್ತು ಮದೀನಾ ಕಾಲೋನಿಗೆ ಹೋಗಲು ಸರ್ವೇ ನಂಬರ್ 17.ಸರ್ವೆ ನಂಬರ 18 ಮತ್ತು ಸರ್ವೇ ನಂಬರ್ 209 ರ ಪೆÇೀಟ್ ಖರಾಬಿನಲ್ಲಿ ಕೂಡು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಚಿಂಚೋಳಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪುರದಲ್ಲಿ ಅತಿಹೆಚ್ಚು ದಲಿತರು ಮತ್ತು ಮುಸ್ಲಿಮರು ವಾಸಿಸುವ ಆಶ್ರಯ ಕಾಲೋನಿ,ಬೆಳ್ಳಿ-ಬೆಳಕು,ಬಸವ ನಗರ ಜೈ ಭೀಮ್ ನಗರ ಮದಿನಾ ಕಾಲೋನಿ ಜನರು ಚಂದಾಪುರ -ಚಿಂಚೋಳಿ ಸರ್ವೇ ನಂಬರ್ 17 ಸರ್ವೇ ನಂಬರ್.18.ಮತ್ತು ಸರ್ವೇ ನಂಬರ್ 209 ರ ಪೆÇೀಟ್ ಖರಾಬಿನಲ್ಲಿ ಸುಮಾರು ವರ್ಷಗಳಿಂದ ನಡೆದುಕೊಂಡು ಹೋಗುತ್ತಿದ್ದರು. ಆದರೇ, ಏಕಾಏಕಿ ರಸ್ತೆ ಬಂದ್ ಮಾಡಿರುವುದರಿಂದ ರೈತರು ಬೆಳೆದಿರುವ ಬೆಳೆಗಳು ತಮ್ಮ ತಮ್ಮ ಮನೆಗಳಿಗೆ ಸಾಗಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಅಲ್ಲದೇ, ದಲಿತರಿಗೆ ವಿವಿಧ ಮೇಲ್ಕಂಡ ಬಡಾವಣೆಗಳ ಸಾರ್ವಜನಿಕರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೀವ್ರ ರೀತಿಯ ತೊಂದರೆಯಾಗುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಚಿಂಚೋಳಿ -ಚಂದಾಪೂರದ ಸರ್ವೇ ನಂಬರ್ 17.18.209 ರ ಪೆÇೀಠ್ ಖರಾಬಿನಲ್ಲಿ ಮೊದಲಿನಂತೆ ಕೂಡು ರಸ್ತೆ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ಒಂದು ವಾರದೊಳಗಾಗಿ ಅನುಕೂಲ ಮಾಡಿಕೊಡಬೇಕೆಂದು ಸಮಸ್ಯೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ಸಾಮಾಜಿಕ ಹೋರಾಟಗಾರ ಮಾರುತಿ ಬಿ ಗಂಜಗಿರಿ, ಸಂತೋಷ ಗುತ್ತೇದಾರ್
ವಿಜಯಕುಮಾರ್ ಘಾಟಗೆ, ಸಿದ್ದು ರಂಗನೂರ, ಜಗನ್ನಾಥ ರಾಮತಿರ್ಥ, ನಾಗಮ್ಮ ರಂಗನೂರ, ಕಾವೇರಿ ಮಂಜುನಾಥ ಭೋವಿ, ಪೃಥ್ವಿ ಚಿಮ್ಮಾಇದ್ಲಾಯಿ, ಶಿವಯೋಗಿ, ಹರೀಶ್ ದೇಗಲ್ಮಡಿ ಸೇರಿದಂತೆ ಇನ್ನಿತರರಿದ್ದರು.