
ಕಲಬುರಗಿ,ಮೇ.7-ಕಲಬುರಗಿ ನಗರ ಪೊಲೀಸರು ಎರಡು ತಿಂಗಳ ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ಪೋರ್ಟಲ್ ಮೂಲಕ 1.45 ಕೋಟಿ ರೂ.ಮೌಲ್ಯದ 785 ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದು, ಪತ್ತೆಯಾದ ಮೊಬೈಲ್ಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಕೊಂಡ ಬಗ್ಗೆ ಇ-ಲಾಸ್ಟ್ ಮತ್ತು ಸಿಇಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರು. ಈ ದೂರುಗಳ ಅನ್ವಯ ಕಳವಾದ ಮೊಬೈಲ್ಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್ ಅವರ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಇನ್ಸಪೆಕ್ಟರ್ಗಳ ಮುಂದಾಳತ್ವದಲ್ಲಿ ಸಿಇಐಆರ್ ಪೋರ್ಟಲ್ ಹಾಗೂ ಸಿಇಎನ್ ಪೊಲೀಸ್ ಠಾಣೆಗಳ ಸಿಬ್ಬಂದಿ ಸಹಾಯದಿಂದ 1.45 ಕೋಟಿ ರೂ.ಮೌಲ್ಯದ 785 ಮೊಬೈಲ್ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಇಲ್ಲಿಯವರೆಗೆ 2,408 ಮೊಬೈಲ್ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಚೌಕ್ ಪೊಲೀಸ್ ಠಾಣೆಯಿಂದ 150, ರೋಜಾ ಪೊಲೀಸ್ ಠಾಣೆಯಿಂದ 131, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಿಂದ 80, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಿಂದ 68, ಅಶೋಕ ನಗರ ಪೊಲೀಸ್ ಠಾಣೆಯಿಂದ 67, ಸಬ್ ಅರ್ಬನ್ ಪೊಲೀಸ್ ಠಾಣೆಯಿಂದ 66, ಸೆನ್ ಪೊಲೀಸ್ ಠಾಣೆಯಿಂದ 59, ಬ್ರಹ್ಮಪೂರ ಪೊಲೀಸ್ ಠಾಣೆಯಿಂದ 54, ಎಂ.ಬಿ.ನಗರ ಪೊಲೀಸ್ ಠಾಣೆಯಿಂದ 46, ರಾಘವೇಂದ್ರ ನಗರ ಪೊಲೀಸ್ ಠಾಣೆಯಿಂದ 42, ಫರಹತಾಬಾದ ಪೊಲೀಸ್ ಠಾಣೆಯಿಂದ 22 ಮೊಬೈಲ್ ಸೇರಿ 785 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲಬುರಗಿ ನಗರದಲ್ಲಿ ಕಳ್ಳತನವಾದ/ಕಳೆದುಕೊಂಡ ಮೊಬೈಲ್ಗಳ ಪೈಕಿ ದೇಶದ ವಿವಿಧ ರಾಜ್ಯಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಕರ್ನಾಟಕದಲ್ಲಿ 688, ಮಹಾರಾಷ್ಟ್ರದಲ್ಲಿ 41, ಆಂಧ್ರಪ್ರದೇಶದಲ್ಲಿ 23, ತೆಲಂಗಾಣದಲ್ಲಿ 23, ಬಿಹಾರದಲ್ಲಿ 7, ಉತ್ತರ ಪ್ರದೇಶದಲ್ಲಿ 3 ಮೊಬೈಲ್ಗಳನ್ನು, ಅದರಲ್ಲಿ ಕಲಬುರಗಿ ನಗರದಲ್ಲಿ 487, ಕಲಬುರಗಿ ಜಿಲ್ಲೆಯಲ್ಲಿ 103, ವಿಜಯಪುರ ಜಿಲ್ಲೆಯಲ್ಲಿ 20, ಬೀದರ್ ಜಿಲ್ಲೆಯಲ್ಲಿ 18, ಬೆಂಗಳೂರು ಜಿಲ್ಲೆಯಲ್ಲಿ 17, ಯಾದಗಿರಿ ಜಿಲ್ಲೆಯಲ್ಲಿ 16, ರಾಯಚೂರು ಜಿಲ್ಲೆಯಲ್ಲಿ 12, ವಿಜಯನಗರ ಜಿಲ್ಲೆಯಲ್ಲಿ 8 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 7 ಮೊಬೈಲ್ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಮೊಬೈಲ್ಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ಗಳ್ನು ಅಳವಡಿಸಬೇಕು, ಮೊಬೈಲ್ಗಳಲ್ಲಿ ಫೈಂಡ್ ಮೈ ಡಿವೈಸ್ ಸೆಟ್ಟಿಂಗ್ಸ್ಗಳನ್ನು ಸಕ್ರಿಯಗೊಳಿಸಬೇಕು, ಮೊಬೈಲ್ಗಳಿಗೆ ಥಂಬ್ ಲಾಕ್ಗಳನ್ನು ಅಳವಡಿಸಬೇಕು, ಮೊಬೈಲ್ ಕಳೆದುಕೊಂಡಾಗ ಕಡ್ಡಾಯವಾಗಿ ಇ-ಲಾಸ್ಟ್ ಮತ್ತು ಸಿಇಐಆರ್ ಪೋರ್ಟಲ್ಗಳಲ್ಲಿ ದೂರು ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.
ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ವಿವಿಧ ಪೊಲೀಸ್ ಠಾಣೆಗಳ ಇನ್ಸಪೆಕ್ಟರ್ಗಳು, ಸಿಇಐಆರ್ ಪೋರ್ಟಲ್ ಹಾಗೂ ಸಿಇಎನ್ ಪೊಲೀಸ್ ಠಾಣೆಗಳ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





















