
ಬೆಳಗಾವಿ,ಡಿ.೧೨-ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶೇ೬೦ ರಷ್ಟು ಕನ್ನಡ ಭಾಷೆಯಿರುವ ಕನ್ನಡ ನಾಮಪಲಕವನ್ನು ಒಂದು ತಿಂಗಳೊಳಗೆ ಕಡ್ಡಾಯವಾಗಿ ಅನುಷ್ಠಾನ ಗೊಳಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಮೇಲ್ಮನೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ
ಕನ್ನಡ ನಾಮಪಲಕ ಕಡ್ಡಾಯಗೊಳಿಸುವ ಸಂಬಂಧ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಕಾರ್ಯಾಪಡೆಯನ್ನು ರಾಜ್ಯದ ಬೆಂಗಳೂರಿನ ೮ ವಲಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರಚಿಸಲಾಗಿದೆ ಎಂದು ಹೇಳಿದರು.
ಕನ್ನಡ ನಾಮಪಲಕ ಕಡ್ಡಾಯಗೊಳಿಸುವ ಸಂಬಂಧಿಸಿದಂತೆ ರಾಜ್ಯಮಟ್ಟದ ಸಮಿತಿಯನ್ನು ರಚಿಸಲಾಗಿದೆ ಬೆಂಗಳೂರಿನ ೮ ವಲಯ ಮಾಡಿ ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದು ಪೊಲೀಸ್ ಒಳಗೊಂಡು ವಿವಿಧ ಇಲಾಖೆಯ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಪಡೆದ, ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ ೬೦ ರಷ್ಟು ಪುದರ್ಶಿಸಲಾಗಿದೆ ಮತ್ತು ಕನ್ನಡ ಭಾಷೆಯು ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಅನುಷ್ಠಾನ ಜವಾಬ್ದಾರಿ ಕಾಯ್ದೆಯ ರಾಜ್ಯದ ಎಲ್ಲಾ ನಿರಂತರ ಅಧಿನಿಯಮದಂತೆ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ ಈ ಸಂಬಂಧ ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಾಮಫಲಕ ಕೈ ಅಳವಡಿಕೆ ಕುರಿತಂತೆ ನಿಗಾವಹಿಸಲು ಸೂಚನೆ ೨ ನೀಡಲಾಗಿರುತ್ತದೆ. ಕನ್ನಡದಲ್ಲಿ ನಾಮಫಲಕ ೨ ಅಳವಡಿಸಿಕೊಳ್ಳದ ಸಂಘಸಂಸ್ಥೆಗಳ ವಿರುದ್ಧ ಕನ್ನಡ ವ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ೨೦೨೨ರ ನಿಯಮ ೨೩ರ ಅನುಸಾರ ಮೊದಲನೆಯ ಅಪರಾಧಕ್ಕಾಗಿ ೫ಸಾವಿರ, ಎರಡನೇ ಅಪರಾಧಕ್ಕೆ ೧೦ ಸಾವಿರ ಮತ್ತು ನಂತರದ ಪ್ರತಿ ಅಪರಾಧಕ್ಕಾಗಿ ರೂ. ೨೦ ಸಾವಿರವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಮತ್ತು ಪರವಾನಗಿಯನ್ನು ಗುರಿಯಾಗುವುದು ರದ್ದುಗೊಳಿಸುವುದಕ್ಕೆ ಎಂದಿರುತ್ತದೆ. ಸದರಿ ಅಧಿನಿಯಮದಂತೆ ಕ್ರಮವಹಿಸಲು ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ ಎಂದು ವಿವರಿಸಿದರು.
ಪ್ರಶ್ನೆ ಕೇಳಿದ ಉಮಾಶ್ರೀ ಅವರು ಕನ್ನಡ ನಾಮಪಲಕವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ತಡ ಮಾಡಿರುವುದು ಸರಿಯಿಲ್ಲ ಇದರಿಂದ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.




























