
ಬೆಂಗಳೂರು,ಫೆ.೧೦- ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಿದ್ದು,ಈ ಕಾರ್ಯಾಚರಣೆಯಲ್ಲಿ ಪಶ್ಚಿಮ ಕಾರ್ಡ್ ರಸ್ತೆ ೪ನೇ ಹಂತ ಬಡಾವಣೆ ಅಗ್ರಹಾರ ದಾಸರಹಳ್ಳಿ ಗ್ರಾಮ ಸರ್ವೆ ನಂ. ೦೮ ರಲ್ಲಿ ತೆರವು ಕಾರ್ಯಾಚರಣೆ ಕೈಗೊಂಡು ಸುಮಾರು ರೂ. ೫೮.೩೪ ಕೋಟಿ ಮೌಲ್ಯದ ವಾಣಿಜ್ಯ ಸ್ವತ್ತನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ ಅಗ್ರಹಾರ ದಾಸರಹಳ್ಳಿ ಗ್ರಾಮದ ಸರ್ವೆ ನಂ. ೮ ರ ಸುಮಾರು ೩೬ ಗುಂಟೆ ವಾಣಿಜ್ಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವನ್ನು ತೆರವುಗೊಳಿಸಿ, ಸುಮಾರು ೫೮.೩೪ ಕೋಟಿ ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು.
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ, ವಲಯ ಅಧಿಕಾರಿಗಳು, ಅಭಿಯಂತರ ಸದಸ್ಯರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-೧, ಪಶ್ಚಿಮ ವಿಭಾಗ ಹಾಗೂ ಉಪ-ವಿಭಾಗದ ಅಭಿಯಂತರರು, ವಿದ್ಯುತ್ ವಿಭಾಗದ ಅಭಿಯಂತರರು ಮತ್ತು ಸರ್ವೆಯರ್ ಹಾಗೂ ಎಸ್.ಟಿ.ಎಫ್ ಸಿಂಬಂಧಿ ಪಡೆ, ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವುಕಾರ್ಯಾಚರಣೆಯನ್ನು ಕೈಗೊಂಡು ಸದರಿ ಪ್ರದೇಶವನ್ನು ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಯಿತು.

























