
ಕಲಬುರಗಿ,ಡಿ.3-ಗ್ರಾಹಕರೊಬ್ಬರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬ್ಯಾಂಕಿನಲ್ಲಿರುವ ನಿಮ್ಮ ಖಾತೆಯನ್ನು ಇಂಟರ್ನೆಟ್ ಬ್ಯಾಂಕಿಂಗ್‍ಗೆ ಅಪ್ಡೇಟ್ ಮಾಡಲಾಗುವುದು ಎಂದು ಹೇಳಿ ಅವರ ಖಾತೆಯಲ್ಲಿದ್ದ 5.58 ಲಕ್ಷ ರೂಪಾಯಿ ಗುಳುಂ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ವೀರೇಂದ್ರ ಪಾಟೀಲ ಬಡಾವಣೆಯ ಶಿವಲಿಂಗಪ್ಪ ಪುಟಗಿ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶಿವಲಿಂಗಪ್ಪ ಪುಟಗಿ ಅವರು ಮನೆಯಲ್ಲಿದ್ದಾಗ ಅಖಿಲೇಶ್ ಮಿಶ್ರಾ ಹೆಸರಿನ ವ್ಯಕ್ತಿಯೊಬ್ಬ ಇವರ ಮೊಬೈಲ್‍ಗೆ ಕರೆ ಮಾಡಿ, ” ನಿಮ್ಮ ಖಾತೆಯನ್ನು ಇಂಟರ್ನೆಟ್ ಬ್ಯಾಂಕಿಗೆ ಅಪ್ಡೇಟ್ ಮಾಡಲಾಗುವುದು. ನಿಮ್ಮ ಮೊಬೈಲ್ ನಂಬರ್‍ಗೆ ಒಟಿಪಿ ಬರುತ್ತದೆ ಅದನ್ನು ನನಗೆ ತಿಳಿಸಿ” ಎಂದಿದ್ದಾನೆ. ಮೊಬೈಲ್‍ಗೆ ಬಂದ ಓಟಿಪಿಯನ್ನು ಶಿವಲಿಂಗಪ್ಪ ಪುಟಗಿ ಅವರು ತಿಳಿಸಿದ ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ 58 ಸಾವಿರ ರೂ.ಕಡಿತವಾಗಿರುವ ಬಗ್ಗೆ ಅವರ ಮೊಬೈಲ್‍ಗೆ ಮೆಸೇಜ್ ಬಂದಿದೆ. ತಕ್ಷಣವೇ ಅವರು ಬ್ಯಾಂಕಿಗೆ ಹೋಗಿ ತಮ್ಮ ಖಾತೆಯಿಂದ 58 ಸಾವಿರ ರೂ. ಕಡಿತವಾಗಿರುವ ವಿಚಾರಿಸಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ಹಂತ ಹಂತವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಒಮ್ಮೆ 3 ಲಕ್ಷ, ಇನ್ನೊಮ್ಮೆ 2 ಲಕ್ಷ, ಮೊತ್ತಮ್ಮೆ 48 ಸಾವಿರ ರೂಪಾಯಿ ಸೇರಿ ಒಟ್ಟು 5.58 ¯ಕ್ಷ ಕಡಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.































