Home ಜಿಲ್ಲೆ ಕಲಬುರಗಿ ಲಂಚ ಪಡೆದ ಗ್ರಾಮಲೆಕ್ಕಾಧಿಕಾರಿಗೆ 4 ವರ್ಷ ಜೈಲು

ಲಂಚ ಪಡೆದ ಗ್ರಾಮಲೆಕ್ಕಾಧಿಕಾರಿಗೆ 4 ವರ್ಷ ಜೈಲು

ಕಲಬುರಗಿ,ಏ 9: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ವಿಶೇಷನ್ಯಾಯಾಲಯ ತೀರ್ಪು ನೀಡಿದೆ.
2017ರಲ್ಲಿ ಜೇವರಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸೂರ್ಯಕಾಂತ ಜಮಾದಾರ ಶಿಕ್ಷೆಗೆ ಗುರಿಯಾದ ಅಪರಾಧಿ. ಜಮೀನಿನ ಋಣಭಾರದ ಹೆಸರು ತೆಗೆಯಲು ಈತ ಲಂಚ ತೆಗೆದುಕೊಂಡಿದ್ದ. ಪ್ರಕರಣದ ವಾದ ವಿವಾದ ಆಲಿಸಿದ ಜಿಲ್ಲಾ ಪ್ರಧಾನ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮಿನಾರಾಯಣ ಅವರು ಅಪರಾಧಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಅಶೋಕ ಎಸ್. ಚಾಂದಕವಠೆÀ ವಾದ ಮಂಡಿಸಿದ್ದರು. ಪಿಐ ಕೆ.ಎಸ್.ಕಲ್ಲದೇವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಘಟನೆಯ ಹಿನ್ನೆಲೆ:
ಕಟ್ಟಿ ಸಂಗಾವಿ ಗ್ರಾಮದ ಹಣಮಂತ ಶಿವರಾಯ ತಳವಾರ ದೂರು ನೀಡಿದ್ದರು. ದೂರುದಾರನ ತಂದೆಯ ಹೆಸರಿನಲ್ಲಿನ ಇನಾಮು ಜಮೀನಿನ ಪಹಣಿಯಲ್ಲಿ ಕಾಲಂನಂ 11ರಲ್ಲಿ ಋಣಭಾರ ಸಹಾಯಕ ಆಯುಕ್ತರ ಹೆಸರು ಇತ್ತು. ಅದನ್ನು ತೆಗೆಯಲು ಗ್ರಾಮ ಲೆಕ್ಕಾಧಿಕಾರಿಗೆ ಮನವಿ ಮಾಡಿದ್ದರು. ಕೆಲಸ ಮಾಡಿಕೊಡಲು 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಮೊದಲಿಗೆ 6 ಸಾವಿರ ರೂ ಲಂಚ ತೆಗೆದುಕೊಂಡಿದ್ದರು. ಉಳಿದ9 ಸಾವಿರರೂ.ಗಳನ್ನು ಜೇವರಗಿ ಮಿನಿ ವಿಧಾನಸೌಧದ ಟೀ ಸ್ಟಾಲ್‍ನಲ್ಲಿ ಲಂಚ ಪಡೆಯುವಾಗ ಆ ವೇಳೆಯ ಎಸಿಬಿ ಅಧಿ ಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.