Home ಮುಖಪುಟ ಸುದ್ದಿ ೩,೮೮೯ ಕೋಟಿ ಪೂರ್ವ ನಗರ ಪಾಲಿಕೆ ಬಜೆಟ್ ಮಂಡನೆ

೩,೮೮೯ ಕೋಟಿ ಪೂರ್ವ ನಗರ ಪಾಲಿಕೆ ಬಜೆಟ್ ಮಂಡನೆ

ಬೆಂಗಳೂರು, ಮಾ.-೨೭- ನಗರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿರುವ ೩೮೮೯ ಕೋಟಿ ಮೊತ್ತದ ಬೆಂಗಳೂರು ಪೂರ್ವ ನಗರ ಪಾಲಿಕೆ ಬಜೆಟ್ ಇಂದು ಮಂಡನೆಯಾಯಿತು.


ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಉಪಸ್ಥಿತಿಯಲ್ಲಿ, ಮಹದೇವಪುರದಲ್ಲಿರುವ ಖಾಸಗಿ ಸಭಾಂಗಣದಲ್ಲಿ ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಬಜೆಟ್ ಮಂಡಿಸಿದರು.

  • ಕಲ್ಯಾಣಕ್ಕೆ ೨೨೧ ಕೋಟಿ ಮೀಸಲು
    ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ೨೨೧ ಕೋಟಿ ಮೀಸಲು ಮಾಡಲಾಗಿದೆ.
    ೧ಃಊಏ ಮನೆ ಖರೀದಿಗೆ ೫ ಲಕ್ಷ ಸಹಾಯಧನ
    ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ವಿದೇಶಿ ವಿದ್ಯಾಭ್ಯಾಸ ಪ್ರೋತ್ಸಾಹ
    ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ
    ಉಚಿತ ಲ್ಯಾಪ್‌ಟಾಪ್ ವಿತರಣೆ (೨೦೨೬-೨೭ ವಿದ್ಯಾರ್ಥಿಗಳಿಗೆ)
  • ಪೌರ ಕಾರ್ಮಿಕರು & ಮಹಿಳೆಯರಿಗೆ ವಿಶೇಷ ಯೋಜನೆ
    ೧೬೦೫ ಪೌರ ಕಾರ್ಮಿಕರಿಗೆ ಆರೋಗ್ಯ ಯೋಜನೆ
    ೧೩೩೦ ಮಂದಿಗೆ ಖಾಯಂ ನೇಮಕ
    ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಇ-ಸ್ಕೂಟರ್
    ಉಚಿತ ಹೊಲಿಗೆ ತರಬೇತಿ & ಯಂತ್ರ ವಿತರಣೆ
  • ವಿಶೇಷ ಚೇತನ & ಬೀದಿ ವ್ಯಾಪಾರಿಗಳಿಗೆ ನೆರವು
    ಎಲೆಕ್ಟ್ರಿಕ್ ವೀಲ್‌ಚೇರ್, ವಿಶೇಷ ದ್ವಿಚಕ್ರ ವಾಹನ
    ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ
  • ಮೂಲಸೌಕರ್ಯಕ್ಕೆ ದೊಡ್ಡ ಒತ್ತು
    ರಸ್ತೆ, ಟನಲ್, ಫ್ಲೈಓವರ್ ಅಭಿವೃದ್ಧಿಗೆ ?೪೫೦ ಕೋಟಿ
    ೧೦೦ ಕಿಮೀ ಪಾದಚಾರಿ ಮಾರ್ಗ ನಿರ್ಮಾಣ
    ಕೆರೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ
    ೧೪ ಎಕರೆ ಭೂಸ್ವಾಧೀನ ರಸ್ತೆ ವಿಸ್ತರಣೆಗಾಗಿ ೫೧೦ ಕೋಟಿ ಮೌಲ್ಯ
  • ಡಿಜಿಟಲ್ ಆಡಳಿತಕ್ಕೆ ಒತ್ತು
    ೪.೫ ಲಕ್ಷ ಖಾತೆಗಳ ಡಿಜಿಟಲೀಕರಣ
    ಇ-ಖಾತಾ, ಜಿಯೋ ಟ್ಯಾಗಿಂಗ್, ಬ್ಲಾಕ್‌ಚೈನ್ ಬಳಕೆ
    ಆನ್‌ಲೈನ್ ಕಟ್ಟಡ ಅನುಮತಿ ವ್ಯವಸ್ಥೆ
    ಂI ಆಧಾರಿತ ಸಿಬ್ಬಂದಿ ಹಾಜರಾತಿ
  • ಆದಾಯ ವೃದ್ಧಿಗೆ ಕ್ರಮ
    ಆಸ್ತಿ ತೆರಿಗೆ ಬಲಪಡಿಸಿ ೧೫೦ ಕೋಟಿ ಹೆಚ್ಚುವರಿ ಗುರಿ
    ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ೨೨೫ ಕೋಟಿ ನಿರೀಕ್ಷೆ
    ಜಾಹೀರಾತುಗಳಿಂದ ೬೮ ಕೋಟಿ ಆದಾಯ ಗುರಿ
  • ವೆಚ್ಚದ ವಿವರ (೩೮೮೯ ಕೋಟಿ)
    ಸಿಬ್ಬಂದಿ ವೆಚ್ಚ -೩೦೨ ಕೋಟಿ
    ಆಡಳಿತ ವೆಚ್ಚ – ೮೨ ಕೋಟಿ
    ಕಸ ವಿಲೇವಾರಿ – ೩೦೦ ಕೋಟಿ
    ನಿರ್ವಹಣೆ -೩೪೨ ಕೋಟಿ
    ಆರೋಗ್ಯ & ಶಿಕ್ಷಣ – ೨೬೭ ಕೋಟಿ
    ಅಭಿವೃದ್ಧಿ ಕಾಮಗಾರಿಗಳು – ೨೪೦೦ ಕೋಟಿ
    ಸಾಲ ಮರುಪಾವತಿ -೧೯೩ ಕೋಟಿ
  • ಶಾಸಕಿ ಮಂಜುಳ ಲಿಂಬಾವಳಿ ಅಭಿಪ್ರಾಯ
    ಪೂರ್ವ ವಲಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ಹಾಳಾಗುತ್ತಿವೆ. ವರ್ತೂರು, ಬೆಳ್ಳಂದೂರು ಕೆರೆ ಅಭಿವೃದ್ಧಿ ವೇಗಗೊಳ್ಳಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಅಗತ್ಯ ಎಂದು ಒತ್ತಾಯಿಸಿದರು.
  • ಆಯುಕ್ತ ರಮೇಶ್ ಪ್ರತಿಕ್ರಿಯೆ
    ಪೂರ್ವ ನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ರಸ್ತೆ ಸಂಪರ್ಕ, ಮೂಲಸೌಕರ್ಯ ಹಾಗೂ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಈ ಬಜೆಟ್‌ನಲ್ಲಿ ಮೂಲಸೌಕರ್ಯ ಕಲ್ಯಾಣ ಯೋಜನೆಗಳ ಸಮತೋಲನ ಕಾಣಿಸಿಕೊಂಡಿದ್ದು, ಪೂರ್ವ ಬೆಂಗಳೂರಿನ ವೇಗದ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಯತ್ನವಾಗಿದೆ.