Home ಕ್ರೈಂ ಸುದ್ದಿಗಳು 22 ವಿವಿಧ ಸ್ವತ್ತಿನ ಪ್ರಕರಣ: 36 ಆರೋಪಿಗಳ ಬಂಧನ

22 ವಿವಿಧ ಸ್ವತ್ತಿನ ಪ್ರಕರಣ: 36 ಆರೋಪಿಗಳ ಬಂಧನ

ವಿಜಯಪುರ, ಮಾ. 17: ಜಿಲ್ಲೆಯ ಬಸವನ ಬಾಗೇವಾಡಿ ಉಪ-ವಿಭಾಗದ ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟೆ, ಬಸವನ ಬಾಗೇವಾಡಿ ಹಾಗೂ ಕೂಡಗಿ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ 22 ಸ್ವತ್ತಿನ ಪ್ರಕರಣಗಳಲ್ಲಿ ಪೆÇಲೀಸರು 36 ಆರೋಪಿಗಳನ್ನು ಹೆಡೆ ಮುರಿ ಕಟ್ಟಿದ್ದಾರೆ.
ತೋಟದ ಮನೆ, ದೇವಸ್ಥಾನದ ಬಾಗಿಲು, ಮನೆಗಳ ಬಾಗಿಲು ಮುರಿದು ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಕಳ್ಳತನ, ಬಂಗಾರದ ತಾಳಿಸರ ಸುಲಿಗೆ ಪ್ರಕರಣ, ಮೋಸ ಮಾಡಿ ಕಳವು ಪ್ರಕರಣ, ಮೋಟಾರ್ ಬೈಕ್ ಹಾಗೂ ರೈತರ ಜಮೀನಿನಲ್ಲಿರುವ ಬೋರವೆಲ್ ಪಂಪಸೆಟ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 22 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ 36 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 1,27,38,800/- ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 02 ಕಾರ್‍ಗಳು, 17 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಸವನಬಾಗೇವಾಡಿ ಉಪವಿಭಾಗದಲ್ಲಿ ಕಳ್ಳತನ, ದರೋಡೆ, ಮೋಸ, ಸುಲಿಗೆ ಮುಂತಾದ ಅಪರಾಧಿಕ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ ವಿಶೇಷ ಪೆÇಲೀಸ್ ತನಿಖಾ ತಂಡ ರಚಿಸಿ ತೀವ್ರ ಶೋಧನೆ ಕಾರ್ಯ ಕೈಗೊಳ್ಳಲಾಗಿತ್ತು. ಈ ತನಿಖಾ ತಂಡ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಪರಾಧಿಗಳನ್ನು ಪತ್ತೆ ಹಚ್ಚಿ ಎಲ್ಲ ಪ್ರಕರಣಗಳನ್ನು ಭೇದಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ನಿಂಬರಗಿ ತಿಳಿಸಿದ್ದಾರೆ.
ಮುದ್ದೇಬಿಹಾಳ ಪೆÇಲೀಸ್ ಠಾಣಾ ವ್ಯಾಪ್ತಿಯ ಮುದ್ನಾಳ ಸೀಮೆ ಬಾಗಿಲು ಮುರಿದು ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ ಮನೆಯ ಬಾಗಿಲುಗಳ ಕೀಲಿಕೊಂಡಿ ಮುರಿದು ಬಂಗಾರ, ಬೆಳ್ಳಿ ಆಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಪ್ರಕರಣದ ಆರೋಪಿತರಾದ ರಾಯಚೂರು ಜಿಲ್ಲೆಯ ಜಲಾಲ್ ನಗರದ ಗುರುರಾಜ @ ದೊಡ್ಡಗುರು, ಎಲ್ಬಿಎಸ್ ನಗರದ ಗುರುಕುಮಾರ @ ಕಿರಣಕುಮಾರ್, ರಾಯಚೂರಿನ ಬೆಸ್ತಾರ ಪೆಟ್ ಸಿಟಿ ಟಾಕೀಸ್ ಹತ್ತಿರ ಅಸ್ಲಮ್ಶ @ ಮಿನ್ನು ತಂದೆ ನಾದರಷಾ ಅವರುಗಳನ್ನು ಬಂಧಿಸಿ, ಆರೋಪಿತರಿಂದ ಸುಮಾರು 26 ತೊಲೆ ಬಂಗಾರ, 3•5ಕೆ.ಜಿ ಬೆಳ್ಳಿ, 4,30,000 ರೂಪಾಯಿ ಮತ್ತು ಕೃತ್ಯಕ್ಕೆ ಬಳಿಸಿದ ಇನೋವಾ ಕಾರ್ ಸೇರಿ ಒಟ್ಟು 51,35,000 ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುದ್ದೇಬಿಹಾಳ ಪೆÇಲೀಸ್ ಠಾಣೆಯ ಕವಡಿಮಟ್ಟಿ ಗ್ರಾಮದಲ್ಲಿರುವ ಮನೆ ಕೀಲಿ ಒಡೆದು ಒಳ ಹೊಕ್ಕು ದೇವರ ಕೋಣೆಯಲ್ಲಿ ಒಟ್ಟು 87 ಗ್ರಾಂ ಬಂಗಾರದ ಆಭರಣಗಳು, 60 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ರೋಖ ಹಣ ರೂ 50,000 ಸೇರಿದಂತೆ ಅವುಗಳ ಒಟ್ಟು ಮೌಲ್ಯ 7,49,000ರೂ. ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿತ್ತು.
ಈ ಪ್ರಕರಣದ ಆರೋಪಿ ಕವಡಿಮಟ್ಟಿಯ ಬಸವರಾಜ ಸಂಗಪ್ಪ ಹೊಕ್ರಾಣಿ ಈತನನ್ನು ಬಂಧಿಸಿ, ಆರೋಪಿತನಿಂದ 89 ಗ್ರಾಂ ಬಂಗಾರದ ಆಭರಣಗಳು, 110 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ನಗದು ರೂ 37,932 ಸೇರಿದಂತೆ ಒಟ್ಟು 7,55,432 ರೂ.ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇದೆ ಎಂದು ಎಸ್ಪಿ ನಿಂಬರಗಿ ವಿವರಿಸಿದರು.
ಮುದ್ದೇಬಿಹಾಳ ಪೆÇಲೀಸ್ ಠಾಣೆ ವ್ಯಾಪ್ತಿಯ ಮುದ್ದೇಬಿಹಾಳ ಬಸ್ತಿ ಓಣಿಯಲ್ಲಿರುವ ಮನೆ ಕೀಲಿ ಮುರಿದಿದ್ದು, ಮನೆಯಲ್ಲಿರುವ ಬಂಗಾರದ ಆಭರಣ ಮತ್ತು ರೋಖ ಹಣವನ್ನು ಕಳತನ ಮಾಡಿಕೊಂಡು ಹೋಗಿತ್ತು.ಈ ಪ್ರಕರಣದಲ್ಲಿ 04 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆ ಮಾಡಿ, ಅವರಿಂದ 9.5 ತೊಲಿ ಬಂಗಾರದ ಆಭರಣಗಳು ಮತ್ತು ರೋಖ ಹಣ 1,75,000 ಸೇರಿ ಒಟ್ಟು 12,75,000 ರೂ. ಗಳ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ನಿಡಗುಂದಿ ಪೆÇಲೀಸ್ ಠಾಣೆಯಲ್ಲಿ ಕಿರಶ್ಯಾಳ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲಾ @ ನೀಲಮ್ಮ ಪ್ರಭು ಗಬಸಾವಳಗಿ ರಂದ ತಮ್ಮ ಜಮೀನದಲ್ಲಿ ಕೆಲಸ ಮಾಡುತ್ತಿರುವಾಗ ಯಾರೋ ಆರೋಪಿ ಅವರ ಕೊರಳಲ್ಲಿಂದ 37 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಸುಲಿಗೆ ಮಾಡಿದ್ದ.ಈ ಪ್ರಕರಣದ ಆರೋಪಿ ಕಿರಶ್ಯಾಳ ಗ್ರಾಮದ ರಮೇಶ ಯಮನಪ್ಪ ಚಿತ್ತರಗಿ ಕಿರಶ್ಯಾಳ ಇತನನ್ನು ಪತ್ತೆ ಮಾಡಿ ಬಂಧಿಸಿ, ಆರೋಪಿಯಿಂದ 1,95,000 ರೂ. ಕಿಮತ್ತಿನ 37 ಗ್ರಾಂ ತೂಕದ ಬಂಗಾರದ ತಾಳಿಸರವನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ತಾಳಿಕೋಟೆ ಶಹರದ ಗಂಗಾ ದಾಬಾದ ಮುಂದೆ ನಿಲ್ಲಸಿದ, ಪಿರ್ಯಾದಿಯ ಬಾಬತ್ತಿನ ಸುಮಾರು 90,000 ರೂ. ಬೆಲೆಯ ಬಜಾಜ್ ಪಲ್ಸರ್ ಎನ್‍ಎಸ್-200 ಸಿಸಿ ಮೊಟಾರ್ ಸೈಕಲ್ ಅನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣದ ತಳವಾರ, 4 ಇತನನ್ನು ಪತ್ತೆ ಮಾಡಿ, ಆರೋಪಿತನಿಂದ ಬಜಾಜ್ ಪಲ್ಸರ್ ಎನ್.ಎಸ್ 200 ಸಿಸಿ ಮೊಟಾರ್ ಸೈಕಲ್ ನಂಬರ ಕೆ.ಎ 28 ಎಚ್.ಎಫ್-6348, ಪ್ಯಾಸಿಯನ್ ಮೋಟಿರ್ ಸೈಕಲ ನಂಬರ ಎಪಿ ಎ.ಜೆ 6711, ಬಜಾಜ್ ಪ್ಲಾಟಿನಾ ಮೋಟರ ಸೈಕಲ ನಂಬರ ಕೆ.ಎ 34 ಇ.ಎಮ್-0307, ಹೊಂಡಾ ಶೈನ್ ಮೋಟರ್ ಸೈಕಲ ನಂಬರ ಕೆ.ಎ 36 ಇ.ಟಿ-6972, ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ ಸೈಕಲ್ ನಂಬರ ಕೆ.ಎ 24 ಎಕ್ಷ್-4726 ಕಳ್ಳತನ ಮಾಡಿದ್ದ ಒಟ್ಟು 05 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸವನಬಾಗೇವಾಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಸ ಮಾಡಿ ಕಳುವು ಮಾಡಿಕೊಂಡು ಹೋದ ಪ್ರಕರಣದ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ನಗರಗೇರೆ ಅನೀಲ ರಂಗನಾಥ, ಕಾರ್ತಿಕ್ ಆದಿನಾರಾಯಣ ಅವರನ್ನು ಬಂಧಿಸಿ ಆರೋಪಿತರಿಂದ1. 1 ತೊಲೆಯ ಬಂಗಾರದ ಬೋರಮಾಳ ಅಂದಾಜು ಕಿಮ್ಮತ್ತು ರೂ. 70,000, 2. 1 ತೊಲೆಯ ಬಂಗಾರದ ಮೆಲಗುಂಡ ಅಂದಾಜು ಕಿಮ್ಮತ್ತು ರೂ. 70,000,
ಟಿ.ವ್ಹಿ.ಎಸ್ ರೈಡರ್ ಮೋಟರ್ ಸೈಕಲ್ ನಂ: ಕೆ.ಎ-50/ಇ.ಕೆ-5255 (ಕೃತ್ಯಕ್ಕೆ ಬಳಸಿದ ವಾಹನ) ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಕೂಡಗಿ ಪೆÇಲೀಸ್ ಠಾಣೆಯ ಮಸೂತಿ ಗ್ರಾಮದಲ್ಲಿರುವ ದಾನಮ್ಮ ಪರಯ್ಯ ಗಣಾಚಾರಿ ಇವರ ಮನೆಯ ಬಾಗಿಲದ ಕೀಲಿಯನ್ನು ಮುರಿದು ಮನೆಯಲ್ಲಿದ್ದ 40 ಗ್ರಾಂ ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣದಲ್ಲಿ ಆರೋಪಿತರಾದ ಕಲಾದಗಿಯ ಅಬ್ದುಲ್ ಮೈನೂದ್ದಿನ ಚೀನಿ, ಲೋಕಾಪುರದ ಹೀರಾ ಮಕ್ತಮಸಾಬ ಹುಣಸಿಮರದ ಅವರನ್ನು ಪತ್ತೆ ಮಾಡಿ, ಆರೋಪಿತರು ಕೃತ್ಯಕ್ಕೆ ಬಳಸಿದ ಎರಡು ಮೋಟಾರ ಸೈಕಲ್, ಕಳುವಾಗಿದ್ದ 4,50,000/- ರೂ ಮೌಲ್ಯದ ಸುಮಾರು 40 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಡಗುಂದಿ ಪೆÇಲೀಸ್ ಠಾಣೆ ವ್ಯಾಪ್ತಿಯ ವಂದಾಲ ಗ್ರಾಮದ ಬನಶಂಕರಿ ಗುಡಿಯ ಗೇಟ್ ಚಾವಿ ಮುರಿದು ಒಳಗೆ ಹೋಗಿ ಗರ್ಭ ಗುಡಿಯ ಬಾಗಿಲಕ್ಕೆ ಹಾಕಿದ ಚಿಲಕವನ್ನು ಮುರಿದು ಒಳಗೆ ಹೋಗಿ ದೇವಿಯ ಮೈಮೇಲಿನ ಒಟ್ಟು 95 ಸಾವಿರ ರೂ. ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಹಾಗೂ ಸುಮಾರು 40 ಸಾವಿರ ರೂಪಾಯಿಗಳಿದ್ದ ಕಾಣಿಕೆ ಹುಂಡಿಯನ್ನು ಕಳುವು ಮಾಡಿಕೊಂಡು ಹೋಗಿದ್ದರು.ಈ ಪ್ರಕರಣದ ಆರೋಪಿತರಾದ ನಿಡಗುಂದಿಯ ಸೋಮನಾಥ ಕೂಚಿ, ದಕ್ಷಿಣ ಸೊಲ್ಲಾಪುರದ ಲವಂಗಿ ಗ್ರಾಮದ ಹಾಲಿವಸ್ತಿ ವಿಜಯಪುರದ ಬಂಜಾರ ಕ್ರಾಸ್ ನಿವಾಸಿ ಪ್ರಕಾಶ ಬಗಲಿ ಈತನನ್ನು ಬಂಧಿಸಿದ್ದು, ಈತನ ವಿರುದ್ದ ನಿಡಗುಂದಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 02 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದು ಪತ್ತೆಯಾಗಿದೆ. ಬಂಧಿತ ಆರೋಪಿತರಿಂದ ಹಿರೋ ಎಚ್.ಎಪ್. ಡಿಲಕ್ಸ ಕಂಪನಿಯ ಮೋಟಾರ ಸೈಕಲ್ ನಂ: ಕೆಎ-28/ಎಚ್‍ಎಪ್-9077 ನೇದ್ದು, ಕರಿ ಹಾಗೂ ಗಿಳಿ ಹಸಿರು ಬಣ್ಣದ್ದು, 60,000 ರೂ, ಬಂಗಾರದ ಬೋರಮಳಾ ಒಂದು 05 ಗ್ರಾಂ ತೂಕದ್ದು ಅಂದಾಜು 35,000 ರೂ. ಬಂಗಾರದ ಮೇಲಗುಂಡ ಒಂದು 05 ಗ್ರಾಂ ತೂಕದ್ದು ಅಂದಾಜು 35,000,
ಬಂಗಾರದ ತಾಳಿ ಸರ ಒಂದು 04 ಗ್ರಾಂ ತೂಕದ್ದು 25,000 ಮೌಲ್ಯದ ಚಿನ್ನದ ತಾಳಿಸರ ವಶಪಡಿಸಿಕೊಳ್ಳಲಾಗಿದೆ ಎಸ್ಪಿ ತಿಳಿಸಿದ್ದಾರೆ.
2025-26 ನೇ ಸಾಲಿನಲ್ಲಿ ಒಟ್ಟು 22 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ 36 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 1,27,38,800
ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 02 ಕಾರ್‍ಗಳು
ಹಾಗೂ 17 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ನಿಂಬರಗಿ ವಿವರಿಸಿದ್ದಾರೆ.