
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.15: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಗರದ ಅಕುಲ ಚಲಂ ಬೀದಿಯ ಸಮುದಾಯಭವನದಲ್ಲಿ ನಿನ್ನೆ ನಡೆಯಿತು.
ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಹನುಮಂತಪ್ಪ ಉದ್ಘಾಟಿಸಿ, ಮಹಿಳೆಯರನ್ನು ಸನ್ಮಾನಿಸಿದರು.
ಪೌರ ಕಾರ್ಮಿಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಕಾರ್ಯಕ್ರಮ ದಲ್ಲಿ ಆರೋಗ್ಯ ನಿರೀಕ್ಷಿಕರಾದ ಕಡ್ಲೆ ಬಸವರಾಜ್, ಫರ್ವೀನ್ ಭಾನು. ಸುಮಾರಾಣಿ , ಪಾಲಿಕೆಯ ಜೋನ್ 1 ರ ಸಮುದಾಯದ ಸಂಚಾಲಕರು, ವಾರ್ಡಿನ ಮಹಿಳೆಯರು ಪಾಲ್ಗೊಂಡಿದ್ದರು.



























