
ಸೇಡಂ , ಅ 21: ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ವತಿಯಿಂದ ಮಳಖೇಡ ದರ್ಗಾದಲ್ಲಿ ಇಂದು ಸಂಜೆ 8:30 ಗಂಟೆಗೆ ಬಾಬಾ ಹಜರತ್ ಸೈಯದ್ ಶಹಾ ನ್ಯಾಮ್ ತವೂಲ್ಲಾ ಖಾದ್ರಿ ಅವರ 20 ನೇ ವಾರ್ಷಿಕ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದ್ದು ಸಾನಿಧ್ಯವನ್ನು ದರ್ಗಾದ ಪೂಜ್ಯರಾದ ಹಜರತ್ ಸೈಯದ್ ಶಹ ಮುಸ್ತಫ ಖಾದ್ರಿ ಸಜ್ಜದ್ ನಸೀನ್ ಬಾಬಾರವರು ಅವರು ವಹಿಸಲಿದ್ದು ದರ್ಗಾದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಾಬಾರವರು ಪತ್ರಿಕ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.