
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ಸರಹದ್ದಿನ ಕಂಪ್ಲಿ ತಾಲೂಕಿನ ನೆಲ್ಲುಡಿ ಕೊಟ್ಟಾಲ ಗ್ರಾ ಮದ, ದೊಡ್ಡ ಕಾಲುವೆ ಹತ್ತಿರ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 17.460 ಟನ್ ಪಡಿತರ ಅಕ್ಕಿ ಸಾಗಾಣೆ ಮಾಡುವುದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆಂದ್ರಪ್ರದೇಶದ ಆದೋನಿಯ ಶೇಕ್ಷಾವಲಿ, ಮಾನ್ವಿಯ ವಿನೋದ್. ಹಾಲದಾಳ್ ವೀರಭದ್ರ ಇವರು ಆಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದರು.
ಕುರುಗೋಡು ಪೊಲೀಸ್ ಠಾಣೆಯ ಪಿ.ಎಸ್.ಐ ಸುಪ್ರೀತ್.ವಿ. ಸಿಬ್ಬಂದ ವಿಜಯಕುಮಾರ್, ರಾಜಶೇಖರ್, ಆಂಜಿನಿ ಹಾಗೂ ಫುಡ್ ಇನ್ಸ್ ಫೆಕ್ಟರ್ ಬಿ.ವಿರುಪಾಕ್ಷ ಗೌಡ ಇವರು ಜಂಟಿಯಾಗಿ ದಾಳಿ ಮಾಡಿದ್ದರು.
ರೂ 87300 ರೂ ಮೌಲ್ಯದ ಅಕ್ಕಿ ಜೊತೆ 3 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















