
ಕಲಬುರಗಿ,ಡಿ.10- ಕಲ್ಯಾಣ ಕರ್ನಾಟಕ ಪ್ರದೇಶದ 9000 ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು 1522.49 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಬೃಹತ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು, ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿತಷತ ಸದಸ್ಯ ಡಾ.ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಲ್ಯಾನ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಬಳ್ಳಾರಿ-1554 ಎಕರೆ ಜನೀಮು ಕೈಗಾರಿಕಾ ಅಭಿವೃದ್ದಿಗೆ 234 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅದರಂತೆ ವಿಜಯನಗರ ಜಿಲ್ಲೆಯ 110 ಎಕರೆಗೆ 9.30 ಕೋಟಿ, ಬೀದರ ಜಿಲ್ಲೆಗೆ 1616 ಎಕರೆಗೆ 186 ಕೋಟಿ, ಕಲಬುರಗಿ ಜಿಲ್ಲೆಯ 1535 ಎಕರೆಗೆ 255 ಕೋಟಿ, ಕೊಪ್ಪಳ ಜಿಲ್ಲೆಯ 205 ಎಕರೆಗೆ 72.51 ಕೋಟಿ, ರಾಯಚೂರ ಜಿಲ್ಲೆಯ 2010 ಎಕರೆಗೆ 336 ಕೋಟಿ, ಯಾದಗಿರ ಜಿಲ್ಲೆಯ 2057 ಎಕರೆಗೆ 426 ಕೋಟಿ ರೂ.ಗಳನ್ನು ಖರ್ಚು ಮಾಡಿ ಕೈಗಾರಿಕಾಭಿವೃದ್ದಿ ಪಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗಾರಿಕೆ ನೀತಿ 2025-30 ಹೊರತಂದಿದ್ದು, ಇಲ್ಲಿನ ಕೈಗಾರಿಕೆಗಳಿಗೆ ಹಚ್ಚಿನ ರಿಯಾಯಿ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಡಾ.ಪಾಟೀಲ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರವನ್ನು ನೀಡಿದ್ದಾರೆ.

























