ಧುರಂಧರ್ ಚಿತ್ರೀಕರಣ ವಿಷಾಹಾರ ಸೇವಿಸಿ ೧೨೦ ಜನ ಅಸ್ವಸ್ಥ

ಲಡಾಖ್,ಆ.೧೯-ನಟ ರಣವೀರ್ ಸಿಂಗ್ ಸದ್ಯ ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ, ಇದು ಲಡಾಖ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದೀಗ ಸೆಟ್‌ನಲ್ಲಿ ವಿಷಾಹಾರ ಸೇವಿಸಿ ೧೨೦ ಅಸ್ವಸ್ಥಗೊಂಡಿರುವ ಒಂದು ಘಟನೆ ಜರುಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.


ವರದಿ ಪ್ರಕಾರ, ಲೇಹ್‌ನಲ್ಲಿರುವ ಧುರಂಧರ್ ಘಟಕದ ೧೨೦ ಕ್ಕೂ ಹೆಚ್ಚು ಸದಸ್ಯರು ವಿಷಾಹಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೆಲ್ಲರೂ ಆರೋಗ್ಯ ಇದೀಗ ಸ್ಥಿರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪ್ರಕಾರ, ಆಗಸ್ಟ್ ೧೭ ರ ಭಾನುವಾರ ತಡರಾತ್ರಿ ಎಲ್ಲಾ ರೋಗಿಗಳು ತೀವ್ರ ಹೊಟ್ಟೆ ನೋವು, ತಲೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದರು ಮತ್ತು ನಂತರ ಅವರನ್ನು ಎಸ್‌ಎನ್‌ಎಂ ಆಸ್ಪತ್ರೆಗೆ ಕರೆತರಲಾಯಿತು. ಅವರೆಲ್ಲರೂ ಮುಂಬರುವ ಬಾಲಿವುಡ್ ಚಿತ್ರದ ಚಿತ್ರೀಕರಣಕ್ಕಾಗಿ ಇಲ್ಲಿಗೆ ಬಂದಿರುವ ಸ್ಥಳೀಯೇತರ ಕಾರ್ಮಿಕರು ಎನ್ನಲಾಗಿದೆ.


ಚಿತ್ರೀಕರಣ ಸ್ಥಳದಲ್ಲಿ ಸುಮಾರು ೬೦೦ ಜನರು ಆಹಾರ ಸೇವಿಸಿದ್ದಾರೆ ಅವರಲ್ಲಿ ೧೨೦ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು, ಪರೀಕ್ಷೆಗಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ.ದಾಖಲಾದ ಹಲವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.