
ಕಲಬುರಗಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಸದಾಗಿ ಪ್ರಾರಂಭವಾದ ಬಾಲಕರ ಮೆಡಿಕಲ್ ಇಂಜಿನಿಯರಿಂಗ್ ವಸತಿ ನಿಲಯದ ಮೇಲ್ವಿಚಾರಕರು ಭ್ರಷ್ಟಚಾರದಲ್ಲಿ ತೊಡಗಿದ್ದು, ಅವರನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೆತೃತ್ವದಲ್ಲಿ ಧರಣಿ ಸತ್ಯಗ್ರಹ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಪಂ ಸಿಇಓ ಅವರಿಗೆ ಸಲ್ಲಿಸಲಾಯಿತು. ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಮೊಹ್ಮದ ಜಮಿರೋದ್ದೀನ ಬಾಬಾ, ಪರಶುರಾಮ ಹಡಲಗಿ, ಶಿವರಾಜ ಅಡಕಿ, ನರಸಮ್ಮ ಕೊಂಡಂಪಳ್ಳಿ ಸೇರಿದಂತೆ ದಿನಗೂಲಿ ನೌಕರರು ಇದ್ದರು.





















