
ಕಲಬುರಗಿ: ನಗರದ ಹಳೆ ಜೇವರಗಿ ರಸ್ತೆ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಮತ್ತು ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಶಿವಶರಣ ಪಾಟೀಲ ಜಾವಳಿ ಕಾವ್ಯ ಕುರಿತು ಉಪನ್ಯಾಸ , ಹೂವಿನಹಳ್ಳಿ ನಾಗರಾಜ ಅವರ “ಮಾರಿಜಪ್ಪ” ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಡಾ.ಬಸವರಾಜ ಪಾಟೀಲ ಜಾವಳಿ ಅವರು ಕಾದಂಬರಿ ಲೋಕಾರ್ಪಣೆ ಮಾಡಿದರು.ಡಾ.ಸೂರ್ಯಕಾಂತ ಪಾಟೀಲ,ಡಾ.ಸಿದ್ದರಾಮ ಹೊನ್ಕಲ್, ಪ್ರೊ.ಪ್ರಕಾಶ ಮೊರಗೆ,ಹೂವಿನಹಳ್ಳಿ ನಾಗರಾಜ,ಡಾ.ಪ್ರಿಯದರ್ಶಿನಿ,ಡಾ.ಭಾಗ್ಯಜ್ಯೋತಿ,ಡಾ.ಗವಿಸಿದ್ದಪ್ಪ ಪಾಟೀಲ,ಪ್ರೊ ಸಿದ್ರಾಮಪ್ಪ ಬಣಗಾರ,ಡಾ.ಅನಸೂಯಾ ಪಾಟೀಲ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.





















