ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರ ನಿಂದನಾತ್ಮಕ ಹೇಳಿಕೆ ಖಂಡಿಸಿ ಇಂದು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಸಮಿತಿ ಮತ್ತು ದಲಿತ ಯುವ ಬ್ರಿಗೇಡ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳು ಸೇರಿದಂತೆ ವಿವಿಧ ಗಣ್ಯರಿಗೆ ಮನವಿ ಸಲ್ಲಿಸಲಾಯಿತು.ಮಿಲಿಂದ ಸನಗುಂದಿ,ರಾಜೀವ ಜಾನೆ,ರಮೇಶ ಚಿಮ್ಮಾ ಇದ್ಲಾಯಿ,ಸಂತೋಷ ಹಿರೇಮನಿ,ಪ್ರಕಾಶ ಮೂಲಭಾರತಿ,ಅಮರ ಶಿರವಾಳ,ಸಚಿನ್ ಶಿರವಾಳ,ಅಶೋಕ ವೀರನಾಯಕ,ರೇಣುಕಾ ಸಿಂಗೆ,ಅರುಣಕುಮಾರ,ಗೀತಾ ಮುದಗಲ್,ಶಿವಕುಮಾರ ಮಾನೆ ಸೇರಿದಂತೆ ಹಲವರು ಪಾಲ್ಗೊಂಡರು.