ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಸಂಸ್ಥೆ ವತಿಯಿಂದ ಹಿರಿಯ ರಂಗಭೂಮಿ ಚಲನಚಿತ್ರ ಕಲಾವಿದೆ ಶ್ರೀಮತಿ ಆಶಾಲತಾ ರವರಿಗೆ “ರಂಗ ಗೌರವ ಮತ್ತು ಕುವೆಂಪು ಕನ್ನಡ ರತ್ನ ಶ್ರೀ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕನ್ನಡ ಹೋರಾಟಗಾರರ ಶ್ರೀ ಜಾಣಗೆರೆ ವೆಂಕಟರಾಮಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ ವಿ ನಾಗರಾಜ್ ಮೂರ್ತಿ, ಮಾಜಿ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ ವಿ ರಾಜಾರಾಮ್, ಸಾಹಿತಿ ಸತೀಶ್ ಜವರೇಗೌಡ, ಶ್ರೀ ಚಂದ್ರಶೇಖರ್ ಹಾಗೂ ಸಂಸ್ಥೆ ಅಧ್ಯಕ್ಷರಾದ ಶ್ರೀ ಕುವೆಂಪು ಪ್ರಕಾಶ್, ರವರಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು