
ನಗರದ ಮಹಾಲಕ್ಷ್ಮಿ ಲೇಔಟ್ ಬಸವ ಧಾಮದಲ್ಲಿಂದು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ಆಚರಿಸಲಾಯಿತು. ಮಾಜಿ ಸಚಿವ, ಶಾಸಕ ಕೆ. ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಜಯರಾಮ್, ಮಹದೇವ್, ಶಿವಾನಂದಮೂರ್ತಿ, ಅವಿನ್ ಆರಾಧ್ಯ, ರಾಘವೇಂದ್ರ ಶೆಟ್ಟಿ, ಎನ್. ರಾಘವೇಂದ್ರ, ರೈಲ್ವೆ ನಾರಾಯಣ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.




























