ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ವತಿಯಿಂದ ನಗರದ ಜಿಸಿಎಕೆ ಆಟದ ಮೈದಾನದಲ್ಲಿ ಇಂದು ಆಯೋಜಿಸಿದ್ದ ಅಂತರ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿಗಳ ಡಾ.ಬಿ.ಆರ್.ಅಂಬೇಡ್ಕರ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್‍ನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ.ಗೊಳ್ಳೆ ಶಿವಶರಣಪ್ಪ ಉದ್ಘಾಟಿಸಿದರು. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ, ಡಾ.ಮಲ್ಲೇಶಪ್ಪ ಕುಂಬಾರ, ಡಾ.ರಾಜಕುಮಾರ ಸಲಗರ, ಡಾ.ದವಲಪ್ಪ ಬಿ.ಎಚ್., ಡಾ.ರಾಜಶೇಖರ ಮಡಿವಾಳ, ಡಾ.ರವೀಂದ್ರಕುಮಾರ ಭಂಡಾರಿ, ಪ್ರೊ.ರಮೇಶ ರೆಡ್ಡಿ, ಸ್ಯಾನ್ ಫ್ರಾನ್ಸಿಸ್, ಮಾರಿಯಾ ಆನಂದ, ಡಾ.ರಮೇಶ ಪೋತೆ, ಡಾ.ಬಸಂತ ಸಾಗರ, ಡಾ.ಬಲಭೀಮ ಸಾಂಗ್ಲಿ, ಡಾ.ವಿಶ್ವನಾಥ ಇದ್ದರು.