ಕಲಬುರಗಿ: ನಗರದ ಬಿ.ಸಿ.ಎಂ. ಬಾಲಕರ ಮೆಡಿಕಲ್, ಇಂಜಿನಿಯರಿಂಗ್ ವಸತಿ ನಿಲಯದ ವಾರ್ಡನ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿ.ಪಂ.ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಮಹ್ಮದ್ ಜಮಿರೋದ್ದಿನ್ ಬಾಬಾ, ಪರಶುರಾಮ ಹಡಲಗಿ, ಅಲ್ಲಾ ಪಟೇಲ್ ಸಾವಳಗಿ, ನಾಗರತ್ನ ಮದನಕರ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.