ಕಲಬುರಗಿ: ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2025-26ರ ಅಂಗವಾಗಿ ” ಆರೋಗ್ಯವಂತ ಮಹಿಳೆ-ಸದೃಢ ಸಮಾಜ” ಘೋಷವಾಕ್ಯದಡಿ ಜಾಥಾ ನಡೆಸಲಾಯಿತು. ಪ್ರಾಚಾರ್ಯ ರಾಘವೇಂದ್ರ ಪಿ.ಆರ್., ಕುಲಸಚಿವ ಶರಣಬಸಪ್ಪ ಹಾಲ್ವಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಆರೀಫಾ ಖಾತೂನ್, ಗೋವಿಂದ, ಶ್ರೀದೇವಿ ಗಟ್ಟು, ಡಾ.ಸಪ್ನಾ ಮತ್ತು ವಿದ್ಯಾರ್ಥಿನಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.