
ಕಲಬುರಗಿ: ಗ್ರಾಪಂ 2017ಕ್ಕಿಂತ ಮೋದಲಿನ ಎಲ್ಲಾ ಸಿಬ್ಬಂದಿಗಳಿಗೆ ಏಕಕಾಲಕ್ಕೆ ಅನುಮೋದನೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನೆತೃತ್ವದಲ್ಲಿ ನಗರದ ಜಿಪಂ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. ನಾಗರಾಜ ಜಿ.ಭಂಗೂರ, ಜೈಭೀಮ ಹೊಸಮನಿ, ಮಾರುತಿ ಸುಗ್ಗಾ, ಭೋಸಜರಾಜ ಮಾಲಿಪಾಟೀಲ, ಸಿದ್ದುಗೌಡ, ಮಡಿವಾಳಯ್ಯಾ, ಶಿವಶರಣಪ್ಪ ಯಾದವ, ರಾಜುಕುಮಾರ ಪೂಜಾರಿ ಸೇರಿದಂತೆ ನೌಕರರು ಭಾಗವಹಿಸಿದ್ದರು.






















