ಕಲಬುರಗಿ: ಒಟ್ಟು 56 ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಶಡ್ಯೂಲಗೆ ಸೇರಿಸುವುದು ಮತ್ತು ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ಮತ್ತು ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಗ್ರಹಿಸಿ ಕರ್ನಾಟಕ ರಾಜ್ಯ ವಾಲ್ಮಿಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮಿಕಿ ನಾಯಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು. ವಿ.ಎಸ್.ಉಗ್ರಪ್ಪ, ನಂದಕುಮಾರ ಮಾಲಿಪಾಟೀಲ, ಎಂ.ನರಸಿಂಹಯ್ಯ, ರಘುವೀರ ನಾಯಕ, ಗುರುರಾಜ ಎಂ.ಎಸ್, ಚನ್ನಬಸಪ್ಪ ಎಂ. ಸೇರಿದಂತೆ ಸಮಾಜಬಾಂಧವರು ಭಾಗವಹಿಸಿದ್ದರು.