ಕಲಬುರಗಿ: ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂಘಟಿಸಲಾಗಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಂಘಟನೆ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ್ ಮಾತನಾಡಿದರು. ವಿಶಾಲಾಕ್ಷಿ ಪಾಟೀಲ, ಮಹಾದೇವಿ ಮಾನೆ, ರಾಧಾ ಜಿ., ಜಯಶ್ರೀ, ಭಾರತಿ, ರೂಪಾವತಿ, ರಾಧಿಕಾ, ಮಹಾದೇವಿ ಅತನೂರ, ಮಹಾದೇವಿ ಜಮಾದಾರ, ಶರಣಮ್ಮ ಸೇರಿದಂತೆ ಮತ್ತಿತರರು ಇದ್ದರು.