
ಕಲಬುರಗಿ: ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿತ್ತು. ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪದ್ಮರಾಜ ರಾಸಣಗಿ, ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಪದ್ಮಾವತಿ ಎನ್.ಮಾಲಿಪಾಟೀಲ, ಡಾ.ಜ್ಯೋತಿ ಎಂ.ರಾಠೋಡ್, ಹಣಮಂತರಾಯ ಅಟ್ಟೂರ, ಭೀಮಾಶಂಕರ ಮಾಡಿಯಾಳ, ಸಾಜಿದ್ ಅಹ್ಮದ್, ದಾನಮ್ಮ ಶಹಾಪೂರೆ, ಮೀನಾಕ್ಷಿ ಹಿಪ್ಪರಗಿ, ಯಶೋಧಾ ರಾಠೋಡ್, ಶಿವಲಿಂಗಮ್ಮ ಲೇಂಗಟಿಕರ್, ವಿಜಯಲಕ್ಷ್ಮಿ ಯಳಸಂಗಿ, ವಿದ್ಯಾಶ್ರೀ ಉಮೇಶ ಇದ್ದರು.






















