
ಕಲಬುರಗಿ: ದಲಿತ ಸಮುದಾಯದ ಹಿತಾಸಕ್ತಿಯ ಬಜೆಟ್ ಮಂಡಿಸುವಂತೆ ಆಗ್ರಹಿಸಿ ಇಂದು
ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು .ಸುಧಾಮ ಧನ್ನಿ,ಪಾಂಡುರಂಗ ಮಾವಿನಕರ,ಚಂದಮ್ಮ ಗೋಳಾ,ಸಾಬಮ್ಮ,ಪ್ರದೀಪ,ನಾಗಪ್ಪ ರಾಯಚೂರಕರ್,ಹಣಮಂತ ಅವರು ಸೇರಿದಂತೆ ಹಲವರು ಪಾಲ್ಗೊಂಡರು.

























