ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಸಾರ್ವಜನಿಕರಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲು ಮತ್ತು ಗುರುವಾರದಿಂದ ನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ಮಾನ್ಯ ಪೆÇಲೀಸ್ ಆಯುಕ್ತರಾದ ಡಾ ಶರಣಪ್ಪ ಎಸ್.ಡಿ ಅವರ ನೇತೃತ್ವದಲ್ಲಿ 5 ಜನ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸುವ ಮೂಲಕ, 20 ಜನ ಮಂಗಳ ಮುಖಿಯರೊಂದಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಡಿಸಿಪಿ ಪ್ರವೀಣ್ ನಾಯ್ಕ್, ಎಸಿಪಿ ಪ್ರಭು ಡಿ.ಟಿ ಹಾಗೂ ಪಿಐ ಶಕೀಲ್ ಅಂಗಡಿ ಮತ್ತು ಶಿವಾನಂದ ವಾಲಿಕಾರ ಹಾಜರಿದ್ದರು.