ಕಲಬುರಗಿ: ಜಿಲ್ಲೆಯ ವಾಡಿ ಪಟ್ಟಣಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ವಾಡಿ ( ಜಂ)ರೈಲು ನಿಲ್ದಾಣಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಅವರ ನಾಮಕರಣ ಮಾಡುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ( ಅ) ಜಿಲ್ಲಾ ಯುವ ಘಟಕದಿಂದ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.ಅಭಿಷೇಕ ಚಕ್ರವರ್ತಿ, ರಮೇಶ ನಾಟೇಕರ,ಮಹಾರುದ್ರ ನಾವೆ,ಶರಣಪ್ಪ ವಾಡೇಕರ,ಅಮೀತಕುಮಾರ ಪಂಚಕಟ್ಟಿ,ದತ್ತು ಹೀರಾಪೂರ,ಚಂದ್ರಕಾಂತ ಬಿರಾದಾರ ಸೇರಿದಂತೆ ಹಲವರಿದ್ದರು.