
ಕಲಬುರಗಿ: ಗುಲಬರ್ಗಾ ವಿವಿ, ನಿವೃತ್ತ ನೌಕರರಿಗೆ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ನಿವೃತ್ತಿ ವೇತನ ನೀಡದಿರುವುದನ್ನು ಖಂಡಿಸಿ ಮತ್ತು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಆಗ್ರಹಿಸಿ ಗುಲ್ಬರ್ಗ ವಿವಿ ನಿವೃತ್ತ ನೌಕರರ ಹೋರಾಟ ಸಮಿತಿ ನೆತೃತ್ವದಲ್ಲಿ ಇಂದು ವಿವಿ ಆಡಳಿತ ಕಚೇರಿಯ ಎದುರು, ಪ್ರತಿಭಟನೆ ಕೈಗೊಳ್ಳಲಾಯಿತು ಸಮಿತಿ ಸಂಚಾಲಕ ಎಂ. ಬಿ .ಸಜ್ಜನ, ಶಂಕರಯ್ಯ ಘಂಟಿ, ಎಚ್.ಎಚ್.ಭಜಂತ್ರಿ, ಸತ್ಯನಾರಾಯಣ, ಸಿದ್ದರಾಮ ಹೊನ್ಕಲ, ಯಮನಪ್ಪ ಭೋವಿ ಸೇರಿದಂತೆ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.































