ಸಂಜೆವಾಣಿ ನ್ಯೂಸ್
ಮೈಸೂರು: ಜೂ.20:- ಜಗದ್ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ 2025ರ ದಸರಾ ಉತ್ಸವ 11 ದಿನಗಳ ಕಾಲ ಜರುಗಲಿದೆ.
ಸಾಮಾನ್ಯವಾಗಿ ಮೈಸೂರು ದಸರಾ ಮಹೋತ್ಸವ ಪ್ರತಿ ವರ್ಷ 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ದಸರಾ ಪ್ರಾರಂಭÀವಾಗಿz್ದÁಗಿನಿಂದಲೂ ಅಂದರೆ 400 ವರ್ಷಗಳಿಂದಲೂ 10 ದಿನಗಳ ಕಾಲ ನಡೆಯುತ್ತಲೇ ಬಂದಿದೆ. ದಸರಾ ಎಂದರೆ ದಶ+ಹರ-ಹತ್ತು ದಿನಗಳ ಆಚರಣೆ. ಆದರೆ, ಈ ಬಾರಿ ಸೆ.22ರಿಂದ ಅ.2ರವರೆಗೆ ದಸರಾ ಆಚರಣೆ ಮಾಡಲಾಗುತ್ತದೆ. ಸೆ.26, ಸೆ.27 ಎರಡೂ ದಿನ ಪಂಚಮಿ ಆಗಮನವಿದ್ದು, ಹೀಗಾಗಿ ಈ ಬಾರಿ 11 ದಿನ ದಸರಾ ಆಚರಣೆ ಇರಲಿದೆ. ಇದು ದಸರಾ ಇತಿಹಾಸದ¯್ಲÉೀ ವಿಶೇಷವಾಗಿದೆ.
1410ರಲ್ಲಿ ಮೈಸೂರು ಸಂಸ್ಥಾನದ ಅರಸರ ಆಳ್ವಿಕೆ ಕಾಲದಲ್ಲಿ ದಸರಾ ಮಹೋತ್ಸವ ಆಚರಣೆ ಆರಂಭÀವಾಗಿದ್ದು, ಇದುವರೆಗೂ 11 ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ. ದಸರಾ ಎಂದರೆ ದಶ+ಹರ ಎಂಬರ್ಥವಿದ್ದು, ಹತ್ತು ದಿನಗಳ ಕಾಲ ದಸರಾ ಆಚರಣೆ ಆಗುತ್ತಾ ಬಂದಿತ್ತು. ನವರಾತ್ರಿಯ ಮರುದಿನ ವಿಜಯದಶಮಿ ಆಚರಣೆಯಾಗುತ್ತಿತ್ತು. ಈ ಬಾರಿ ಸೆಪ್ಟೆಂಬರ್ 22ರಿಂದ ಅ.2ರವರೆಗೂ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಆದರೆ, ಸೆ.26 ಮತ್ತು 27ರಂದು ಎರಡೂ ದಿನ ಪಂಚಮಿ ಬಂದಿರುವ ಹಿನ್ನೆಲೆ ದಸರಾ ಉತ್ಸವ 11 ದಿನಗಳ ಕಾಲ ನಡೆಯಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿರುವ ಆಧ್ಯಾತ್ಮಿಕ ಚಿಂತಕ ಡಾ.ಶೆಲ್ವಪಿಳೈ ಅಯ್ಯಂಗಾರ್, ಒಂದು ದಿನ ಹೆಚ್ಚಾಗಿ ದಸರಾ ಮಹೋತ್ಸವ ಆಚರಣೆ ಮಾಡುವುದು ಒಳ್ಳೆಯದರ ಸಂಕೇತವೇ ಆಗಿದೆ. ಹಿರಿಯರು ಎಲ್ಲವೂ ಹೆಚ್ಚಲಿ ಅಂತಲೇ ಹೇಳುತ್ತಾರೆ. ಅದರಂತೆಯೇ ಒಂದು ದಿನ ಹೆಚ್ಚಾಗಿ ದಸರಾ ಮಹೋತ್ಸವ ಆಚರಿಸಿದರೆ ಒಳ್ಳೆಯದೇ ಆಗುತ್ತದೆ. ಭಾರತೀಯರು ಸರ್ವವೂ ಒಳ್ಳೆಯದಾಗಲಿ ಎಂದು ಬಯಸುವವರು. ಸಕಲ ಜೀವರಾಶಿಗೆ ಒಳಿತು ಬಯಸುವ ಭಾರತೀಯರಿಗೆ ಇದರಿಂದ ಕೆಡುಕು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ 11 ದಿನಗಳ ದಸರಾ ಆಚರಣೆ ಅಚ್ಚರಿ, ಕೌತುಕದ ಜತೆಗೆ ಚರ್ಚೆ ಹುಟ್ಟು ಹಾಕಿದ್ದು, ರಾಜ್ಯ ಸರ್ಕಾರ, ಯದುವಂಶದ ರಾಜವಂಶಸ್ಥರು ದಸರಾ ಹೇಗೆ ಆಚರಿಸ್ತಾರೆ ಎಂದು ಕಾದು ನೋಡಬೇಕಿದೆ.