
ನಗರದ ಹಳೇ ಹುಬ್ಬಳ್ಳಿ ಜಂಗ್ಲಿ ಪೇಟೆಯ ಶ್ರೀ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರತ್ನ, ಪವರ್ ಸ್ಟಾರ ದಿ. ಡಾ. ಪುನೀತ ರಾಜಕುಮಾರ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಅಪ್ಪು ಅಭಿಮಾನಿಗಳದ ಬಸವರಾಜ ರಾಯನಾಳ ಹಾಗೂ ಅವರ ತಂಡದ ನೇತೃತ್ವದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಲೋಕೇಶ ಗುಂಜಾಳ, ವೀರಯ್ಯಸ್ವಾಮಿ ಸಾಲಿಮಠ, ನಾಗಪ್ಪ ಭದ್ರಾಪುರ, ಬಸವರಾಜ ಹೊಸೂರ, ಯಲ್ಲಪ್ಪ ದೇವಕ್ಕಿ, ಪ್ರಕಾಶ ಕುಲಕರ್ಣಿ ಹಾಗೂ ಅಪ್ಪು ಅಭಿಮಾನಿಗಳ ಬಳಗದ ಸಿದ್ದಾರ್ಥ ಯಂಟ್ರುವಿ, ಮಂಜುನಾಥ ಚಿಗರಿ, ವಿನೋದ ಮುರಶಿಳ್ಳಿ, ಹರೀಶ ಹಳ್ಳಿಕೇರಿ, ಅಮೃತ ದಾಮೋದರ, ಪದ್ಮಗೊಂಡ ಮೋಟೆ, ವಿನಾಯಕ ಬೇಂದ್ರೆ, ಮಹೇಶ ತಪೇಲಾ, ಮಹಾಂತೇಶ ಚಿಗರಿ ಮತ್ತಿತರರು ಉಪಸ್ಥಿತರಿದ್ದರು.
































