
ಕಲಬುರಗಿ: ನಗರದ ಕೆ.ಸಿ.ಟಿ. ಇಂಜನಿಯರಿಂಗ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಿದರು.ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ,ಶಾಸಕರಾದ ಎಂ.ವೈ ಪಾಟೀಲ,ಅಲ್ಲಮಪ್ರಭು ಪಾಟೀಲ,ಕನೀಜ್ ಫಾತಿಮಾ,ಜಗದೇವ ಗುತ್ತೇದಾರ, ಚಂದ್ರಶೇಖರ ಪಾಟೀಲ,ಬಾಬು ಹೊನ್ನಾನಾಯಕ, ಮೇಯರ್ ವರ್ಷಾ ರಾಜೀವ ಜಾನೆ,ಕುಡಾ ಅಧ್ಯಕ್ಷ ಮಜರ್ ಅಲಂಖಾನ್,ಪಾಲಿಕೆ ಆಯುಕ್ತ ಅವಿನಾಶ ಸಿಂಧೆ,ಶರಣಕುಮಾರ ಮೋದಿ,ಚಂದ್ರಿಕಾ ಪರಮೇಶ್ವರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.