
ಕಲಬುರಗಿ:ಶಹಬಾದ್ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಸೇವಾ ಸಂಘದಿಂದ ಶಹಾಬಾದ್ ರಸ್ತೆಯ ಬಳಿ ಮಾನವ ಸರಪಳಿ ನಡೆಸಿ ಪ್ರತಿಭಟಿಸಲಾಯಿತು.ವೀರಭದ್ರಪ್ಪ ನಾಟೀಕಾರ, ಗುಂಡಪ್ಪ ತಳವಾರ ,ವಿಶ್ವರಾಧ್ಯ ತಳವಾರ,ಗುಂಡಪ್ಪ ಭಂಕೂರ,ಬೆಳ್ಳೆಪ್ಪ ಇಂಗನಕಲ್, ದಶರಥ ತೆಗನೂರ ಸೇರಿದಂತೆ ಹಲವರಿದ್ದರು.