
ಕಲಬುರಗಿ: ನಗರದ ಹೈ.ಕ ಶಿಕ್ಷಣ ಸಂಸ್ಥೆಯ ಎಂಆರ್‍ಎಂಸಿ ಸ್ಯಾಕ್ ಸಭಾಂಗಣದಲ್ಲಿಂದು ಭಾರತೀಯ ಬಾಯಿ ಆರೋಗ್ಯ ಮತ್ತು ದವಡೆ, ಮುಖ ತಜ್ಞರ ಸಂಸ್ಥೆ (ಎಒಎಂಎಸ್‍ಐ) ಕರ್ನಾಟಕ ರಾಜ್ಯ ಘಟಕದ 12 ನೇ ವಾರ್ಷಿಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಹೈಕಶಿ ಸಂಸ್ಥೆ ಎಸ್‍ಎನ್‍ಐಡಿಎಸ್‍ಆರ್ ಸಹಯೋಗದಲ್ಲಿ ಆಯೋಜಿಸಿದ ಕಾಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ,ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ,ಡಾ.ಪದ್ಮರಾಜ ಹೆಗಡೆ,ಡಾ.ಮಣಿಕಂದನ್ ಆರ್,ಡಾ.ಜಯಶ್ರೀ ಮುದ್ದಾ,ಡಾ.ರಾಜಾ ಭೀಮಳ್ಳಿ,ಉದಯಕುಮಾರ ಚಿಂಚೋಳಿ,ಡಾ,ಕೈಲಾಸ ಪಾಟೀಲ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.