
ಕಲಬುರಗಿ: ಬೆಣ್ಣೆತೊರೆ ಮತ್ತು ಅಮರ್ಜಾ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಮಂಜೂರಾದ ಭೂ ಪರಿಹಾರವನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದ ಮೂಲಕವೇ ವಿತರಿಸುವಂತೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷ ಶಿವಲಿಂಗ ಹಳೆಮನಿ,ಜಿಲ್ಲಾಧ್ಯಕ್ಷ ಸಂದೀಪ ಭರಣಿ,ಸುನೀಲ ಸಿರಕೆ,ದಶರಥ ಇಂಗೋಳೆ,ದಿಲ್ದಾರ್ ಸಿಂಗ್,ತನಿಷ ಗಾಜರೆ ಇದ್ದರು.