
ಕಲಬುರಗಿ: ನಗರದ ಮಾತೋಶ್ರೀ ಸಾವಿತ್ರಿಬಾಯಿ ಫುಲೆ ಬಡಾವಣೆಗೆ ಮೂಲಭೂತಸೌಲಭ್ಯ ಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಇಂದು ಬಹುಜನ ಹೋರಾಟ ಸಮಿತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ನಿವಾಸದ ಎದುರಿಗೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.ಸಂಘಟನೆ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣ ಕೋರಿ,ಶಿವಕುಮಾರ ಮುಡ್ಡಿ,ಮುತ್ತಣ್ಣ ನಡಗೇರಿ,ರಾಜಕುಮಾರ ನಡಗೇರಿ,ಅರ್ಜುನ ದೊಡ್ಡಮನಿ,ವಿನೋದ ತಾಯತ್ತ,ಕಾಂತುಗೌಡ ಬಸವಪಟ್ಟಣ,ನ್ಯಾಯವಾದಿ ಶ್ರೀನಿವಾಸ ಸೇರಿದಂತೆ ಹಲವರು ಪಾಲ್ಗೊಂಡರು.